alex Certify 1 ರೂಪಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ‘ಕೊರೊನಾ’ ಗೆದ್ದ 106 ವರ್ಷದ ಅಜ್ಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1 ರೂಪಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ‘ಕೊರೊನಾ’ ಗೆದ್ದ 106 ವರ್ಷದ ಅಜ್ಜಿ

106-year-old Woman Flaunts Her Discharge Certificate After Defeating Covid- 19 in Maharashtra

ದೇಶದಲ್ಲೇ ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿರುವ ಮಹಾರಾಷ್ಟ್ರದ ಥಾಣೆಯಲ್ಲಿ 106 ವಯಸ್ಸಿನ ಅಜ್ಜಿಯೊಬ್ಬರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಅಷ್ಟೇ ಅಲ್ಲದೆ, ಕೊರೋನಾ ಸೋಂಕು ತಗುಲಿತ್ತು ಎಂಬುದನ್ನು ಬಹಿರಂಗಪಡಿಸುವುದಕ್ಕೇ ಹಿಂಜರಿಯುತ್ತಿರುವವರ ನಡುವೆ ಈ ಅಜ್ಜಿ ತುಂಬಾ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ.

ಈಕೆಗೆ ವಯಸ್ಸಾಗಿದ್ದ ಹಿನ್ನೆಲೆಯಲ್ಲಿ ಬಹುತೇಕ ಆಸ್ಪತ್ರೆಗಳು ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದವು. ಎಲ್ಲಿಯೂ ಚಿಕಿತ್ಸೆ ಸಿಗದೆ ಕಂಗಾಲಾಗಿದ್ದ ಅಜ್ಜಿಯ ಕುಟುಂಬದ ನೆರವಿಗೆ ಬಂದದ್ದು ಕೆಡಿಎಂಸಿ ವತಿಯಿಂದ ಸವ್ಳಾರಾಮ್ ಕ್ರೀಡಾ ಸಂಕುಲದಲ್ಲಿ ಸಿದ್ಧಪಡಿಸಿದ 1 ರೂ. ಆಸ್ಪತ್ರೆ.

10 ದಿನಗಳ ಚಿಕಿತ್ಸೆಯಿಂದ ಗುಣಮುಖರಾದ ಬಳಿಕ ಆಕೆಗೊಂದು ಪ್ರಮಾಣಪತ್ರ ಕೊಡುವ ಮೂಲಕ ಸನ್ಮಾನಿಸಲಾಯಿತು. ಪ್ರಮಾಣಪತ್ರ ಪ್ರದರ್ಶನ ಮಾಡಿ ನಗೆ ಬೀರಿದ್ದಾರೆ ಅಜ್ಜಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...