ಜಿಂಕೆಯೊಂದನ್ನು ಇಡಿಯಾಗಿ ನುಂಗಿದ ಹೆಬ್ಬಾವೊಂದು ಕೆಲವೇ ಕ್ಷಣಗಳಲ್ಲಿ ಅದರ ದೇಹವನ್ನು ಹೊರ ಕಕ್ಕಿ ನಿಗೂಢವಾಗಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಘಟಿಸಿದೆ.
ಇಲ್ಲಿನ ಮಲಿಪುರಾ ಗ್ರಾಮದಲ್ಲಿ ಕಬ್ಬಿನ ಗದ್ದೆಯಲ್ಲಿ ಮೇವು ಕಟಾವು ಮಾಡುತ್ತಿದ್ದ ಬಾಲಕಿಯೊಬ್ಬಳು ಹೆಬ್ಬಾವನ್ನು ಕಂಡಿದ್ದಾಳೆ. ಕೂಡಲೇ ಆಕೆ ದೊಡ್ಡವರಿಗೆ ಈ ವಿಷಯ ತಿಳಿಸಿದ್ದಾಳೆ. ಮೊದಲಿಗೆ ಹೆಬ್ಬಾವು ಮಗುವೊಂದನ್ನು ನುಂಗಿರಬಹುದು ಎಂದು ಶಂಕಿಸಿದ್ದರು ಗ್ರಾಮಸ್ಥರು.
ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಯ ನೆರವಿನಿಂದ ಅಲ್ಲಿಂದ ಮೂರು ಕಿಮೀ ದೂರದಲ್ಲಿ ಗಂಗಾ ನದಿಯ ತಟದಲ್ಲಿ ಹೆಬ್ಬಾವನ್ನು ಬಿಟ್ಟುಬರಲಾಯಿತು. ಇದಾದ ಕೆಲವು ನಿಮಿಷಗಳಲ್ಲಿ ನುಂಗಿದ್ದ ಜಿಂಕೆಯನ್ನು ಕಕ್ಕಿಕೊಂಡ ಹೆಬ್ಬಾವು ಅಲ್ಲೇ ಮೃತಪಟ್ಟಿದೆ. ಹೆಬ್ಬಾವಿನ ಸಾವಿಗೆ ಕಾರಣವೇನೆಂದು ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.