alex Certify ಸಿಸಿಬಿ ತಲಾಶ್ ಗೆ ವಿವೇಕ್ ಒಬೆರಾಯ್ ಅಡ್ಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಸಿಬಿ ತಲಾಶ್ ಗೆ ವಿವೇಕ್ ಒಬೆರಾಯ್ ಅಡ್ಡಿ

ಮುಂಬೈ: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರು ಬಾಲಿವುಡ್ ನಟ ವಿವೇಕ್ ಒಬೆರಾಯ್ ನಿವಾಸದ ಮೇಲೆ ದಾಳಿ ನಡೆಸಿದ್ದು, ಆರೋಪಿ ಆದಿತ್ಯ ಆಳ್ವನಿಗಾಗಿ ಶೋಧ ನಡೆಸಿದ್ದಾರೆ. ಆದರೆ ಸಿಸಿಬಿ ಶೋಧಕ್ಕೆ ಒಬೆರಾಯ್ ದಂಪತಿ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.

ಸಿಸಿಬಿ ಪೊಲೀಸರು ಮುಂಬೈನಲ್ಲಿ ವಿವೇಕ್ ಒಬೆರಾಯ್ ನಿವಾಸದ ಮೇಲೆ ದಾಳಿ ನಡೆಸಿದಾಗ ವಿವೇಕ್ ಒಬೆರಾಯ್ ಹಾಗೂ ಅವರ ಪತ್ನಿ ಸಿಸಿಬಿ ಪೊಲೀಸರಿಗೆ ಅಡ್ಡಿ ಪಡಿಸಿದ್ದಾರೆ. ಆದರೆ ಸರ್ಚ್ ವಾರೆಂಟ್ ಪಡೆದು ಬಂದಿದ್ದಾಗಿ ಸಿಸಿಬಿ ಅಧಿಕಾರಿಗಳು ಹೇಳಿದ ಹಿನ್ನೆಲೆಯಲ್ಲಿ ಸುಮ್ಮನಾಗಿದ್ದು, ನಿಮ್ಮ ಕೆಲಸ ನೀವು ಮಾಡಿ ಎಂದಿದ್ದಾರೆ. ಆದರೆ ಮೊಬೈಲ್ ಪರಿಶೀಲನೆಗೆ ಹಾಗೂ ಆದಿತ್ಯ ಆಳ್ವಾ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಆದಿತ್ಯ ಆಳ್ವಾ ತಲೆಮರೆಸಿಕೊಂಡಿದ್ದು, ಹಲವು ದಿನಗಳಿಂದ ಆಳ್ವಾ ಪತ್ತೆಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಈ ನಡುವೆ ಆದಿತ್ಯ ಆಳ್ವಾ ತನ್ನ ಭಾವ ನಟ ವಿವೇಕ್ ಒಬೆರಾಯ್ ಸಹಾಯದಿಂದ ಅವರ ಮುಂಬೈ ನಿವಾಸದಲ್ಲಿ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಒಬೆರಾಯ್ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...