alex Certify ಸಲೂನ್ – ಬ್ಯೂಟಿ ಪಾರ್ಲರ್ ತೆರೆಯುವ ಕುರಿತು ಕೇಂದ್ರ ಸರ್ಕಾರದಿಂದ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲೂನ್ – ಬ್ಯೂಟಿ ಪಾರ್ಲರ್ ತೆರೆಯುವ ಕುರಿತು ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

ಲಾಕ್ ಡೌನ್ ಸಮಯದಲ್ಲಿ ಸಲೂನ್ ಹಾಗೂ ಬ್ಯೂಟಿ ಪಾರ್ಲರ್ ಬಾಗಿಲು ಮುಚ್ಚಿದೆ. ಜನರು ಮನೆಯಲ್ಲೇ ಕ್ಷೌರ ಮಾಡಿಕೊಳ್ತಿದ್ದಾರೆ. ಶುಕ್ರವಾರ ಮಧ್ಯರಾತ್ರಿ ಗೃಹ ಸಚಿವಾಲಯ ಹಸಿರು ವಲಯದ ಸಲೂನ್ ಹಾಗೂ ಬ್ಯೂಟಿಪಾರ್ಲರ್ ತೆರೆಯಲು ಅನುಮತಿ ನೀಡಿತ್ತು. ಆದ್ರೀಗ ಮಾರ್ಗಸೂಚಿ ಬಗ್ಗೆ ಸ್ಪಷ್ಟನೆ ನೀಡಿದೆ.

ಈ ವಿನಾಯಿತಿ ಸಲೂನ್ ಮತ್ತು ಬ್ಯೂಟಿ ಪಾರ್ಲರ್‌ಗಳನ್ನು ತೆರೆಯುವುದಕ್ಕಾಗಿ ಅಲ್ಲ ಎಂದು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ. ಸಲೂನ್ ಮತ್ತು ಬ್ಯೂಟಿ ಪಾರ್ಲರ್‌ಗಳಿಗೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ನಮ್ಮ ಆದೇಶ ಅನ್ವಯಿಸುತ್ತದೆ. ಕ್ಷೌರದಂಗಡಿ ಮತ್ತು ಬ್ಯೂಟಿ ಪಾರ್ಲರ್‌ಗಳನ್ನು ತೆರೆಯಲು ಪ್ರಸ್ತುತ ಯಾವುದೇ ಆದೇಶವಿಲ್ಲ. ಮದ್ಯದಂಗಡಿಗಳನ್ನು ತೆರೆಯುವ ಆದೇಶವಿಲ್ಲ ಎಂದಿದ್ದಾರೆ.

ಗೃಹ ಸಚಿವಾಲಯದ  ಹೊಸ ಆದೇಶದಂತೆ ರೆಸ್ಟೋರೆಂಟ್ ತೆರೆಯಲು ಯಾವುದೇ ಆದೇಶವಿಲ್ಲ. ರೆಸ್ಟೋರೆಂಟ್ ತೆರೆಯಲು ಸರ್ಕಾರ ಅನುಮತಿ ನೀಡಿಲ್ಲವೆಂದು ಗೃಹ ಸಚಿವಾಲಯ ಹೇಳಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...