alex Certify ಸಂಬಂಧದಲ್ಲಿ ಅಣ್ಣ-ತಂಗಿಯಾಗ್ತಿದ್ದವರ ಮಧ್ಯೆ ನಡೀತು ಮದುವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಬಂಧದಲ್ಲಿ ಅಣ್ಣ-ತಂಗಿಯಾಗ್ತಿದ್ದವರ ಮಧ್ಯೆ ನಡೀತು ಮದುವೆ

ಲಾಕ್ ಡೌನ್ ಮಧ್ಯೆಯೇ ಪೊಲೀಸರು ಸಂಬಂಧದಲ್ಲಿ ಅಣ್ಣ-ತಂಗಿಯಾಗ್ತಿದ್ದವರ ಮದುವೆ ಮಾಡಿಸಿದ್ದಾರೆ. 6 ತಿಂಗಳ ಹಿಂದೆ ಇಬ್ಬರೂ ದೆಹಲಿಗೆ ಓಡಿ ಹೋಗಿದ್ದರು. ಲಾಕ್ ಡೌನ್ ಕಾರಣ ಊರಿಗೆ ವಾಪಸ್ ಆಗಿ ಪತಿ-ಪತ್ನಿಯಂತೆ ಇರಲು ಶುರು ಮಾಡಿದ್ದರು. ಇದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು.

ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೊಲೀಸರು ಇಬ್ಬರಿಗೂ ಮದುವೆ ಮಾಡಿಸಿದ್ದಾರೆ. ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ನಡೆದಿದೆ. ಸಹೋದರ ತನಗಿಂತ 13 ವರ್ಷ ಚಿಕ್ಕ ಸಹೋದರಿಯನ್ನು ಮದುವೆಯಾಗಿದ್ದಾನೆ. 18 ವರ್ಷದ ಹುಡುಗ 8ನೇ ತರಗತಿ ಓದುತ್ತಿರುವ ಮಗಳಿಗೆ ಮೋಸ ಮಾಡಿ ಆಕೆ ದಾರಿತಪ್ಪಿಸಿದ್ದಾನೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ದೆಹಲಿಗೆ ಓಡಿ ಹೋಗಿದ್ದವರು ವಾಪಸ್ ಬಂದ್ಮೇಲೆ ಗಲಾಟೆ ಶುರುವಾಗಿತ್ತು. ಮದುವೆಯಾಗದೆ ಹೋದ್ರೆ ಸಾಯುವುದಾಗಿ ಬೆದರಿಸಿದ್ದರಂತೆ. ಹಾಗಾಗಿ ಪೊಲೀಸರು ಅಪ್ರಾಪ್ತೆ ಮದುವೆ ಮಾಡಿಸಿದ್ದಾರೆ ಎನ್ನಲಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...