alex Certify ಶ್ವಾನಗಳ ಜೊತೆ ವಾಕ್ ಹೋಗಿದ್ದ ಯುವತಿ ಏನು ಮಾಡಿದ್ದಾಳೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನಗಳ ಜೊತೆ ವಾಕ್ ಹೋಗಿದ್ದ ಯುವತಿ ಏನು ಮಾಡಿದ್ದಾಳೆ ಗೊತ್ತಾ…?

ಹೈದರಾಬಾದ್: ಮೂರು ನಾಯಿಗಗಳ ಜೊತೆ ವಾಕ್ ಹೋಗುತ್ತೇನೆ ಎಂದು ಮನೆಯಿಂದ ಹೊರ ಹೋಗಿದ್ದ ಯುವತಿ ಬರೋಬ್ಬರಿ ನಾಲ್ಕು ದಿನಗಳ ಬಳಿಕ ಇದೀಗ ಮನೆಗೆ ಬಂದಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಅ.7ರಂದು ನಾಯಿಗಳ ಜೊತೆ ವಾಕ್ ಎಂದು ಮನೆಯಿಂದ ಹೋಗಿದ್ದ ಹಯಾತ್ ನಗರದ 16 ವರ್ಷದ ಲಾರಾ ಎಂಬ ಯುವತಿ ನಾಪತ್ತೆಯಾಗಿ ಕುಟುಂಬದಲ್ಲಿ ಗಾಬರಿ ಮೂಡಿಸಿದ್ದಳು. ಭಯ-ಭೀತರಾದ ಯುವತಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ನಾಲ್ಕು ದಿನಗಳಿಂದ ಪೊಲೀಸರು ಮನೆಯ ಸುತ್ತಮುತ್ತ ಇರುವ 100ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾ ಪರಿಶೀಲಿಸಿದ್ದಾರೆ. ಆದರೆ ಮನೆಯಿಂದ ಹೊರಬಂದ ಯುವತಿ ಎಲ್ಲಿ ಹೋದಳು ಎಂಬ ಸುಳಿವು ಯಾರಿಗೂ ಸಿಕ್ಕಿರಲಿಲ್ಲ.

ನಾಲ್ಕು ದಿನಗಳ ಬಳಿಕ ಯುವತಿ ಇದೀಗ ಸುರಕ್ಷಿತವಾಗಿ ತಾನಾಗೇ ಮನೆಗೆ ವಾಪಸ್ ಬಂದಿದ್ದಾಳೆ. ಈ ನಾಲ್ಕುದಿನಗಳ ಕಾಲ ಯುವತಿ ಎಲ್ಲಿದ್ದಳು ಗೊತ್ತೇ..? ಮನೆಯ ಬಳಿಯ ಪೊದೆಯೊಂದರಲ್ಲಿ ಅಡಗಿ ಕುಳಿತಿದ್ದಳಂತೆ.

ಅಷ್ಟಕ್ಕು ಯುವತಿ ಹೀಗೆ ಮಾಡಿದ್ದಾದರೂ ಏಕೆ ಗೊತ್ತೆ…? ಮಗಳು ಮೊಬೈಲ್ ಫೋನ್ ತುಂಬಾ ಬಳಸುತ್ತಿದ್ದಾಳೆ ಎಂದು ತಂದೆ ಬೈದಿದ್ದಾರೆ. ಇದಕ್ಕೆ ಕೋಪಗೊಂಡ ಯುವತಿ ಅ.7ರಂದು ರಾತ್ರಿ ಊಟ ಮುಗಿಸಿ ತನ್ನ ಪ್ರೀತಿಯ ಮೂರು ನಾಯಿಗಳ ಜೊತೆ ಮನೆಯಿಂದ ಹೊರ ಬಂದಿದ್ದಾಳೆ. ಹೀಗೆ ಹೊರ ಬಂದ ಯುವತಿ ನಾಲ್ಕು ದಿನಗಳಿಂದ ಪೊದೆಯಲ್ಲಿ ಅಡಗಿ ಕುಳಿತು ಮನೆಯವರನ್ನು, ಪೊಲೀಸರನ್ನೂ ಆಟವಾಡಿಸಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...