alex Certify ಲಾಕ್ ಡೌನ್ ವೇಳೆ ತವರಿಗೆ ಹೋದ ಪತ್ನಿ: ಪತಿ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ವೇಳೆ ತವರಿಗೆ ಹೋದ ಪತ್ನಿ: ಪತಿ ಮಾಡಿದ್ದೇನು ಗೊತ್ತಾ…?

ಲಾಕ್ ಡೌನ್ ವೈವಾಹಿಕ ಜೀವನದ ಮೇಲೂ ಪರಿಣಾಮ ಬೀರುತ್ತಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ತ್ರಿವಳಿ ತಲಾಕ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಲಾಕ್ ಡೌನ್ ವೇಳೆ ಪತ್ನಿ ತವರಿಗೆ ಹೋಗಿದ್ದಾಳೆ. ಇದೇ ಅವಕಾಶವನ್ನು ಲಾಭಕ್ಕೆ ಪಡೆದ ಪತಿ ಎರಡನೇ ಮದುವೆಯಾಗಿದ್ದಾನೆ.

ಮಾರ್ಚ್ 19ರಂದು ಪತ್ನಿ ಇಬ್ಬರು ಮಕ್ಕಳ ಜೊತೆ ತವರಿಗೆ ಹೋಗಿದ್ದಳಂತೆ. ಲಾಕ್ ಡೌನ್ ಹಿನ್ನಲೆಯಲ್ಲಿ ವಾಪಸ್ ಮನೆಗೆ ಬರಲು ಆಗಲಿಲ್ಲ. ಏಪ್ರಿಲ್ 20ರಂದು ಸಂಬಂಧಿಕರ ಹುಡುಗಿಯನ್ನು ಎರಡನೇ ಮದುವೆಯಾಗಿದ್ದಾನೆ. ಮೇ 12 ರಂದು ಪತ್ನಿಗೆ ವಿಷ್ಯ ತಿಳಿದಿದೆ. ಇದ್ರಿಂದ ಕಂಗಾಲಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದ್ರೆ ಇನ್ನೂ ಯಾರನ್ನು ಬಂಧಿಸಿಲ್ಲವೆಂದು ಮಹಿಳೆ ನೋವು ತೋಡಿಕೊಂಡಿದ್ದಾಳೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...