ಗುರುಗ್ರಾಮ್ ನಲ್ಲಿ ಗರ್ಭಿಣಿಗೆ ಪತಿ ಹಿಂಸೆ ನೀಡಿದ ಘಟನೆ ಬೆಳಕಿಗೆ ಬಂದಿದೆ. ಗರ್ಭಿಣಿಗೆ ಜನನ ನಿಯಂತ್ರಣದ ಮಾತ್ರೆ ನೀಡುತ್ತಿದ್ದನೆಂದು ಮಹಿಳೆ ಆರೋಪ ಮಾಡಿದ್ದಾಳೆ. ಇದನ್ನು ವಿರೋಧಿಸಿದ್ರೆ ಪತಿ ಹೊಡೆಯುತ್ತಿದ್ದನಂತೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.
30 ವರ್ಷದ ಶ್ವೇತಾ ಶರ್ಮಾ ಎಂಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. 2019ರಂದು ಗೌರವ್ ಶರ್ಮಾ ಜೊತೆ ಶ್ವೇತಾ ಮದುವೆಯಾಗಿದೆ. ಶ್ವೇತಾ ಎರಡುವರೆ ತಿಂಗಳ ಗರ್ಭಿಣಿ. ಲಾಕ್ ಡೌನ್ ವೇಳೆ ಪತಿ, ಪತ್ನಿಗೆ ಒತ್ತಾಯಪೂರ್ವಕವಾಗಿ ನಾಲ್ಕು ಮಾತ್ರೆ ನೀಡಿದ್ದಾನೆ. ನಂತ್ರ ಖಾಸಗಿ ವೈದ್ಯರ ಬಳಿ ಕರೆದೊಯ್ದು ಗರ್ಭಪಾತಕ್ಕೆ ಮುಂದಾಗಿದ್ದಾನೆ.
ಪತ್ನಿ ಒಪ್ಪಿಗೆಯಿಲ್ಲದೆ ಗರ್ಭಪಾತ ಮಾಡಿಸಿ, ಹತ್ಯೆ ಬೆದರಿಕೆ ಹಾಕಿದ್ದನಂತೆ. ವಿಷ್ಯ ತಿಳಿಸಿದ್ರೆ ಕೊಲೆ ಮಾಡುವುದಾಗಿ ಬೆದರಿಸಿದ್ದನಂತೆ.