alex Certify ಲಾಕ್ ಡೌನ್ ನಂತ್ರ ವಿಮಾನ ಪ್ರಯಾಣ ಬೆಳೆಸುವವರಿಗೆ ಇದು ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ನಂತ್ರ ವಿಮಾನ ಪ್ರಯಾಣ ಬೆಳೆಸುವವರಿಗೆ ಇದು ಕಡ್ಡಾಯ

ದೇಶದಲ್ಲಿ ಮೇ 3ರವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. ಮೇ 3ರ ನಂತ್ರ ಕೆಂಪು ವಲಯ ಬಿಟ್ಟು ಬೇರೆ ಪ್ರದೇಶಗಳಲ್ಲಿ ಲಾಕ್ ಡೌನ್ ಸಡಿಲಿಸಲಾಗುವುದು. ಆದ್ರೆ ವಿಮಾನ ಹಾರಾಟ ಹಾಗೂ ರೈಲು ಸಂಚಾರದ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಲಾಕ್ ಡೌನ್ ನಂತ್ರ ವಿಮಾನ ಪ್ರಯಾಣ ಬೆಳೆಸುವವರು ಕೆಲವೊಂದು ದಾಖಲೆಗಳನ್ನು ನೀಡಬೇಕಾಗುತ್ತದೆ.

ಮೂಲಗಳ ಪ್ರಕಾರ ವಿಮಾನ ಪ್ರಯಾಣಿಕರು ವೈದ್ಯಕೀಯ ಪ್ರಮಾಣ ಪತ್ರವನ್ನು ತೋರಿಸಬೇಕು. ಮಾಸ್ಕ್, ಕ್ಯಾಪ್ ಧರಿಸುವುದು ಕಡ್ಡಾಯ ಎನ್ನಲಾಗ್ತಿದೆ. ಕೊರೊನಾ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ವೈದ್ಯರು, ಅಧಿಕಾರಿಗಳು, ವಿಮಾನ ನಿಲ್ದಾಣ ಮತ್ತು ವಿಮಾನಯಾನ ಅಧಿಕಾರಿಗಳ ತಾಂತ್ರಿಕ ಸಮಿತಿಯು ವಿಮಾನ ಪ್ರಯಾಣಕ್ಕಾಗಿ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಇದಕ್ಕಾಗಿ ಮಾರ್ಗಸೂಚಿ ಜಾರಿಗೊಳಿಸಿದೆ. ಇದು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಲಾಗಿದೆ.

ಮೇ 15 ರ ನಂತರ ದೇಶದಲ್ಲಿ ವಿಮಾನಗಳು ಮತ್ತು ರೈಲುಗಳು ಮತ್ತೆ ಚಲಿಸುವ ನಿರೀಕ್ಷೆಯಿದೆ. ಜೂನ್ ವೇಳೆಗೆ ಲಾಕ್ ಡೌನ್ ಸಂಪೂರ್ಣ ತೆಗೆಯಲ್ಪಡುವ ಸಾಧ್ಯತೆಯಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...