alex Certify ರಜನಿಕಾಂತ್ ಪಕ್ಷದ ಪದಾಧಿಕಾರಿಗಳು ‘ಡಿಎಂಕೆ’ ಗೆ ಸೇರ್ಪಡೆ…! ಅಚ್ಚರಿಗೆ ಕಾರಣವಾಗಿದೆ ಸೂಪರ್ ಸ್ಟಾರ್ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಜನಿಕಾಂತ್ ಪಕ್ಷದ ಪದಾಧಿಕಾರಿಗಳು ‘ಡಿಎಂಕೆ’ ಗೆ ಸೇರ್ಪಡೆ…! ಅಚ್ಚರಿಗೆ ಕಾರಣವಾಗಿದೆ ಸೂಪರ್ ಸ್ಟಾರ್ ಹೇಳಿಕೆ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ ರಜನಿ ಮಕ್ಕಳ್ ಮಂದ್ರಂ ಪಕ್ಷದ ಪದಾಧಿಕಾರಿಗಳು ಡಿಎಂಕೆ ಸೇರಿರುವ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ರಜನಿಕಾಂತ್, ಆರ್ಎಂಎಂ ಸದಸ್ಯರು ಯಾವುದೇ ಪಕ್ಷ ಸೇರಲು ಸ್ವತಂತ್ರರು ಎಂದಿದ್ದಾರೆ.

ರಜನಿ ಮಕ್ಕಳ್ ಮಂದ್ರಂ ಸದಸ್ಯರು ನನ್ನ ಅಭಿಮಾನಿಗಳು. ಅವರು ಯಾವ ಪಕ್ಷ ಸೇರಿದರೂ ನನ್ನ ಮೇಲಿನ ಅಭಿಮಾನ ಅವರಲ್ಲಿ ಹಾಗೆಯೇ ಇರುತ್ತದೆ. ಅವರು ಎಂದಿಗೂ ನನ್ನ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ಅನಾರೋಗ್ಯದ ಕಾರಣದಿಂದ ರಜನಿಕಾಂತ್ ರಾಜಕೀಯ ಪ್ರವೇಶಿಸುವ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಇದರ ಬೆನ್ನಲ್ಲೇ ಅವರು ಸ್ಥಾಪಿಸಲು ಹೊರಟಿದ್ದ ರಜನಿ ಮಕ್ಕಳ್ ಮಂದ್ರಂ ನ ಹಲವು ಸದಸ್ಯರು ಡಿಎಂಕೆಗೆ ಸೇರ್ಪಡೆಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...