alex Certify ಮೂರನೇ ಪತ್ನಿ ಕಣ್ಣಿಗೆ ಬಿದ್ಲು ಗಂಡನ ನಾಲ್ಕನೇ ಹೆಂಡತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರನೇ ಪತ್ನಿ ಕಣ್ಣಿಗೆ ಬಿದ್ಲು ಗಂಡನ ನಾಲ್ಕನೇ ಹೆಂಡತಿ…!

ಮಧ್ಯಪ್ರದೇಶದ ನರಸಿಂಹಪುರದಲ್ಲಿ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿದ್ದಾನೆ. ಆತನ ಮದುವೆಯೇ ಆತನ ಆತ್ಮಹತ್ಯೆಗೆ ಕಾರಣ ಎನ್ನಲಾಗ್ತಿದೆ. ವ್ಯಕ್ತಿ ಒಂದಲ್ಲ ಎರಡಲ್ಲ ನಾಲ್ಕು ಮದುವೆಯಾಗಿದ್ದ. ಮೂರನೇ ಪತ್ನಿ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆ.

ಘಟನೆ ನಡೆದ ದಿನ ವ್ಯಕ್ತಿ ಮೂರನೇ ಪತ್ನಿ ಮನೆಗೆ ನಾಲ್ಕನೇ ಪತ್ನಿಯನ್ನು ಕರೆತಂದಿದ್ದನಂತೆ. ಮೂರನೇ ಪತ್ನಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇಬ್ಬರ ಮಧ್ಯೆ ಈ ವಿಷ್ಯಕ್ಕೆ ಗಲಾಟೆ ನಡೆದಿದೆ. ಮನೆಯಲ್ಲಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿವೆ. ಘಟನೆ ನಂತ್ರ ಮೂರನೇ ಪತ್ನಿ ಪಕ್ಕದ ಮನೆಗೆ ಹೋಗಿ ಮಲಗಿದ್ದಳಂತೆ.

ಬೆಳಿಗ್ಗೆ ಮನೆಗೆ ವಾಪಸ್ ಬಂದಾಗ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದಿದ್ದಾಳೆ. ಮೃತನ ಮೊದಲ ಪತ್ನಿ ಸಾವನ್ನಪ್ಪಿದ್ದಾಳೆ. ಎರಡನೇ ಪತ್ನಿ ಬೇರೆ ಊರಿನಲ್ಲಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...