ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಅರುದ್ ಎಂಬ ಹಳ್ಳಿಯಲ್ಲಿ ಸೋಮವಾರ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಮೀನುಗಾರಿಕೆಗೆ ಹೋದ ಹುಡುಗನಿಗೆ ಮೀನು ಸಿಗಲಿಲ್ಲ. ಐನೂರು ಮತ್ತು ಎರಡು ಸಾವಿರ ನೋಟುಗಳ ಕಂತೆ ಸಿಕ್ಕಿದೆ. ಸುಮಾರು 20 ಸಾವಿರ ರೂಪಾಯಿ ಇದ್ರಲ್ಲಿದೆ.
ಲಾಕ್ ಡೌನ್ ವೇಳೆ ಸಿಕ್ಕ ಈ ಹಣ ಗ್ರಾಮಸ್ಥರ ಖುಷಿಗೆ ಕಾರಣವಾಗಿಲ್ಲ. ಬದಲಾಗಿ ಭಯ ಹೆಚ್ಚಿಸಿದೆ. ಪೊಲೀಸರಿಗೂ ತಲೆನೋವು ತಂದಿದೆ. ಇದನ್ನು ಯಾರು ಇಲ್ಲಿ ಹಾಕಿದ್ದಾರೆಂಬ ಹುಡುಕಾಟ ಶುರುವಾಗಿದೆ. ಕೆಲ ದಿನಗಳ ಹಿಂದೆ ರಸ್ತೆ ಮೇಲೆ 500 ನೋಟುಗಳನ್ನು ಇಲ್ಲಿ ಎಸೆಯಲಾಗಿತ್ತು.
ಹಣ 7 ಗಂಟೆಗೆ ಸಿಕ್ಕಿದೆ. ಆದ್ರೆ 6 ಗಂಟೆಗೆ ಕಾರಿನಲ್ಲಿ ಬಂದ ಇಬ್ಬರು ಕೆರೆಗೆ ಏನೋ ಎಸೆದು ಹೋಗಿದ್ದಾರೆ. ಅದನ್ನು ಗ್ರಾಮದ ಯುವಕನೊಬ್ಬ ನೋಡಿದ್ದನಂತೆ. ಆದ್ರೆ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲವೆಂದಿದ್ದಾನೆ.