alex Certify ಮಹಾ ಯುದ್ಧದ ಬಳಿಕ ಪ್ರಪಂಚ ಬದಲಾದಂತೆ ಕೋವಿಡ್ ಬಳಿಕ ಜಗತ್ತು ಬದಲಾಗುತ್ತಿದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾ ಯುದ್ಧದ ಬಳಿಕ ಪ್ರಪಂಚ ಬದಲಾದಂತೆ ಕೋವಿಡ್ ಬಳಿಕ ಜಗತ್ತು ಬದಲಾಗುತ್ತಿದೆ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡುತ್ತಿದ್ದು, ಕೊರೊನಾ ಮಹಾಮಾರಿಯಿಂದಾಗಿ ಎಲ್ಲಾ ಕ್ಷೇತ್ರಗಳು ಸಂಕಷ್ಟ ಎದುರಿಸಿದ್ದು, ಕೊರೊನಾ ವಿರುದ್ಧ ಹೋರಾಟದಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಹೇಳಿದ್ದಾರೆ.

BUDGET LIVE: ಕೇಂದ್ರ‌ ಬಜೆಟ್ 2021 – ಮುಖ್ಯಾಂಶಗಳು

ಕೇಂದ್ರ ಸರ್ಕಾರ ಕೊರೊನಾ ಸಂಕಷ್ಟವನ್ನು ಯಶಸ್ವಿಯಾಗಿ ನಿಭಾಯಿಸಿದ್ದು, ಶೀಘ್ರದಲ್ಲಿಯೇ ಇನ್ನೂ ಎರಡು ಕೊರೊನಾ ಲಸಿಕೆಗಳ ವಿತರಣೆ ಆರಂಭವಾಗಲಿದೆ. ಮಹಾಯುದ್ಧದ ನಂತರ ಜಗತ್ತು ಬದಲಾಗುವಂತೆ ಕೊವಿಡ್-19 ನಂತರ ಜಗತ್ತು ವೇಗವಾಗಿ ಬದಲಾಗುತ್ತಿದೆ ಎಂದರು.

ಮೊದಲ ಬಾರಿ ಕಾಗದ ರಹಿತ ಬಜೆಟ್ ಮಂಡನೆ; ಟ್ಯಾಬ್ ಮೂಲಕ ಆಯವ್ಯಯ ಮಂಡಿಸಲಿದ್ದಾರೆ ವಿತ್ತ ಸಚಿವೆ

ಆರ್ಥಿಕತೆಗೆ ಒತ್ತು ನೀಡುತ್ತೇವೆ ಎಂದು ನಾವು ಹೇಳಿದ್ದೇವೆ. ಅದೇ ರೀತಿ ಈ ಬಾರಿ ಬಜೆಟ್ ನಲ್ಲಿ ಆರ್ಥಿಕತೆಗೆ ಹೆಚ್ಚು ಒತ್ತು ನಿಡಲಾಗಿದೆ. ಹೊಸ ದಶಕದ ಮೊದಲ ಬಜೆಟ್ ಇದಾಗಿದ್ದು, ಸಂಪೂರ್ಣ ಡಿಜಿಟಲ್ ಬಜೆಟ್ ಎಂದರು. ಈ ಬಾರಿ ಬಜೆಟ್ ನಲ್ಲಿ ನಾಲ್ಕು ಮುಖ್ಯ ಆಧಾರ ಸ್ತಂಭಗಳಿದ್ದು, ಆರೋಗ್ಯ, ಮಾನವ ಸಂಪನ್ಮೂಲ, ಆವೀಷ್ಕಾರ-ಶಂಶೋಧನೆ-ಅಭಿವೃದ್ಧಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಎಂಬ ನಾಲ್ಕು ವಿಧಗಳಲ್ಲಿ ಆಯವ್ಯಯ ಪರಿಕಲ್ಪನೆ ಹೊಂದಲಾಗಿದೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...