alex Certify ಮನೆಗೆ ಬಾರದ ಪತ್ನಿ, ಪತಿ ಮಾಡಿದ್ದೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ಬಾರದ ಪತ್ನಿ, ಪತಿ ಮಾಡಿದ್ದೇನು ಗೊತ್ತಾ….?

ಮಧ್ಯಪ್ರದೇಶದ ದಮೋಹ್‌ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸುಂಕುಯಾ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಮಾವ, ನಾದಿನಿ ಮತ್ತು ಪತ್ನಿ ಮೇಲೆ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಮಾವ ಹಾಗೂ ನಾದಿನಿ ಸಾವನ್ನಪ್ಪಿದ್ದಾರೆ. ಪತ್ನಿ ಸ್ಥಿತಿ ಗಂಭಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ವರ್ಷದ ಹಿಂದೆ ಆರೋಪಿ ಮದುವೆಯಾಗಿತ್ತಂತೆ. ಮದುವೆ ನಂತ್ರ ಪತ್ನಿ ಗಂಡನ ಮನೆಗೆ ಬಂದಿರಲಿಲ್ಲವಂತೆ. ಇದ್ರಿಂದ ಬೂಟಿಯಾ ಕೋಪಗೊಂಡಿದ್ದನಂತೆ. ಅನೇಕ ಬಾರಿ ಮನೆಗೆ ಬರುವಂತೆ ಪತ್ನಿ ದ್ರೌಪತಿಗೆ ಹೇಳಿದ್ದನಂತೆ. ಆದ್ರೆ ಆಕೆ ಒಪ್ಪಿರಲಿಲ್ಲವಂತೆ.

ಮಂಗಳವಾರ ರಾತ್ರಿ ಮನೆಗೆ ಬಂದ ಬೂಟಿಯಾ ದಾಳಿ ಶುರು ಮಾಡಿದ್ದಾನೆ. ಮಗಳನ್ನು ರಕ್ಷಿಸಲು ಬಂದ ಮಾವ ಹಾಗೂ ನಾದಿನಿ ಮೇಲೂ ದಾಳಿ ನಡೆಸಿದ್ದಾನೆ. ಅವರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪತ್ನಿ ದ್ರೌಪತಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...