alex Certify ಮತ್ತೊಮ್ಮೆ ಏಷ್ಯಾದ ನಂ.1 ಶ್ರೀಮಂತರಾಗಿ ಹೊರಹೊಮ್ಮಿರುವ ಅಂಬಾನಿ ಆಸ್ತಿ ಎಷ್ಟು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಮ್ಮೆ ಏಷ್ಯಾದ ನಂ.1 ಶ್ರೀಮಂತರಾಗಿ ಹೊರಹೊಮ್ಮಿರುವ ಅಂಬಾನಿ ಆಸ್ತಿ ಎಷ್ಟು ಗೊತ್ತಾ…?

ಕಳೆದ ಹಲವು ವರ್ಷಗಳಿಂದ ಏಷ್ಯಾದ ನಂಬರ್ ಒನ್ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಕೊರೊನಾ ಲಾಕ್ಡೌನ್ ನಿಂದಾಗಿ ರಿಲಯನ್ಸ್ ಷೇರುಗಳ ಮೌಲ್ಯ ಕುಸಿದಿದ್ದ ಕಾರಣ ಆ ಪಟ್ಟವನ್ನು ಕಳೆದುಕೊಂಡಿದ್ದರು.

ಆ ಬಳಿಕ ನಡೆದ ಬೆಳವಣಿಗೆಯಲ್ಲಿ ಸಾಮಾಜಿಕ ಜಾಲತಾಣದ ದೈತ್ಯ ಸಂಸ್ಥೆ ಫೇಸ್ಬುಕ್ ಸೇರಿದಂತೆ ಹಲವು ಸಂಸ್ಥೆಗಳು ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ಹೂಡಿಕೆ ಮಾಡಿದ್ದು, ಜೊತೆಗೆ ಲಾಕ್ಡೌನ್ ಸಡಿಲಿಕೆಯಿಂದಾಗಿ ಆರ್ಥಿಕ ಚಟುವಟಿಕೆ ಆರಂಭವಾದ ಕಾರಣ ರಿಲಯನ್ಸ್ ಷೇರುಗಳ ಮೌಲ್ಯವೂ ಏರಿಕೆಯಾಗಿತ್ತು.

ಇದರಿಂದಾಗಿ ಮುಖೇಶ್ ಅಂಬಾನಿ ಮತ್ತೊಮ್ಮೆ ಏಷ್ಯಾದ ನಂಬರ್ ಒನ್ ಶ್ರೀಮಂತರಾಗಿ ಹೊರಹೊಮ್ಮಿದ್ದು, ಅವರ ಆಸ್ತಿಯ ಮೌಲ್ಯ ಬರೋಬ್ಬರಿ 57.5 ಶತಕೋಟಿ ಡಾಲರ್ ಗಳಾಗಿದೆ. ದ್ವಿತೀಯ ಸ್ಥಾನದಲ್ಲಿರುವ ಜಾಕ್ ಮಾ ಅವರ ಆಸ್ತಿ ಮೌಲ್ಯ 47.3 ಶತಕೋಟಿ ಡಾಲರ್ ಗಳಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...