alex Certify ಮಂಗ ಮಾಡಿದ್ದ ಅವಾಂತರಕ್ಕೆ ಕಂಗಾಲಾಗಿ ಹೋಗಿದ್ದ ಪೊಲೀಸರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಗ ಮಾಡಿದ್ದ ಅವಾಂತರಕ್ಕೆ ಕಂಗಾಲಾಗಿ ಹೋಗಿದ್ದ ಪೊಲೀಸರು..!

ಎಟಿಎಂನಲ್ಲಿದ್ದ ಫಲಕಗಳು, ಕೆಲ ಭಾಗಗಳು ಹಾನಿಯಾಗಿದ್ದವು‌. ಹೀಗಾಗಿ ಲಾಕ್ ಡೌನ್ ಸಮಯ ನೋಡಿಕೊಂಡು ಯಾರೊ ಕಳ್ಳರು ಈ ಕೆಲಸ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಹಾಗಾಗಿಯೇ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಆದರೆ ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ ಕಂಡು ಶಾಕ್ ಆಗಿದ್ದಾರೆ.

ಹೌದು, ಈ ಘಟನೆ ನಡೆದಿರುವುದು ದೆಹಲಿಯ ಸೌತ್ ಅವೆನ್ಯೂ ಪ್ರದೇಶದಲ್ಲಿ. ಅಲ್ಲಿನ ಎಸ್.ಬಿ.ಐ. ಬ್ಯಾಂಕ್ ಎಟಿಎಂ ನಲ್ಲಿ ಕೋತಿಯೊಂದು ಮಾಡಿದ ಅವಾಂತರ ಇಷ್ಟಕ್ಕೆಲ್ಲಾ ಕಾರಣವಾಗಿದೆ. ಎಟಿಎಂ ಒಳಗೆ ಬಂದ ಕೋತಿ ಹೊರಗೆ ಹೋಗಲು ಆಗದೆ ಒದ್ದಾಡಿದೆ. ಈ ವೇಳೆ ಸುಮ್ಮನೆ ಇರಲಾರದೆ ಎಟಿಎಂ ಕೆಲ ಭಾಗಗಳು, ನಾಮಫಲಕಗಳನ್ನು ಕಿತ್ತು ಹಾಕಿದೆ.

ಇನ್ನು ಕೋತಿಯ ಈ ವಿಡಿಯೊ ಸಕ್ಕತ್ ವೈರಲ್ ಆಗಿದೆ. ಸಾಮಾಜಿಕ‌ ಜಾಲತಾಣದಲ್ಲಿ ವಿಡಿಯೊ ನೋಡಿದ ನೆಟ್ಟಿಗರು ಫುಲ್ ಎಂಜಾಯ್ ಮಾಡಿದ್ದಾರೆ. ತರಹೇವಾರಿ ಕಮೆಂಟ್ ಗಳನ್ನು ಮಾಡುವ ಮೂಲಕ ಲಾಕ್ ಡೌನ್ ಸಮಯದಲ್ಲಿ ಎಂಜಾಯ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...