alex Certify ಭಾರತೀಯರಿಗೆ ಬ್ಯಾಡ್ ನ್ಯೂಸ್: ಮತ್ತಷ್ಟು ಹೆಚ್ಚಲಿದೆ ಕೊರೊನಾ ಸೋಂಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯರಿಗೆ ಬ್ಯಾಡ್ ನ್ಯೂಸ್: ಮತ್ತಷ್ಟು ಹೆಚ್ಚಲಿದೆ ಕೊರೊನಾ ಸೋಂಕು

ಭಾರತ ಸೇರಿದಂತೆ ವಿಶ್ವದಾದ್ಯಂರ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಆರಂಭದಲ್ಲಿ ಭಾರತದಲ್ಲಿ ನಿಯಂತ್ರಣದಲ್ಲಿದ್ದ ಕೊರೊನಾ ಈಗ ಎಲ್ಲೆ ಮೀರಿ ಅಬ್ಬರಿಸುತ್ತಿದೆ. ಭಾರತೀಯರಿಗೆ ಮಿಚಿಗನ್ ವಿಶ್ವವಿದ್ಯಾಲಯ ಮತ್ತು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಎಚ್ಚರಿಕೆ ನೀಡಿದೆ. ಭಾರತದಲ್ಲಿ ಜುಲೈ ಮೊದಲ ವಾರದ ವೇಳೆಗೆ 21 ಮಿಲಿಯನ್ ಜನರು ಸೋಂಕಿಗೆ ಒಳಗಾಗಬಹುದು ಎಂದು ಎಚ್ಚರಿಕೆ ನೀಡಿದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪ್ರತಿ 13 ದಿನಗಳಿಗೊಮ್ಮೆ ದ್ವಿಗುಣಗೊಳ್ಳುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ ಲಾಕ್‌ಡೌನ್‌ಗೆ ಸಂಬಂಧಿಸಿದ ನಿರ್ಬಂಧಗಳನ್ನು ಸಡಿಲಗೊಳಿಸುವುದರಿಂದ ತೊಂದರೆಗಳು ಹೆಚ್ಚಾಗುತ್ತವೆ ಎಂದಿದೆ.

ಇದಕ್ಕೂ ಹಿಂದೆ  ವಿಶ್ವವಿದ್ಯಾಲಯದ ಪ್ರೊಫೆಸರ್ ಮುಖರ್ಜಿ ಅವರ ತಂಡವು ಮೇ ಮಧ್ಯದ ವೇಳೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷಕ್ಕಿಂತ ಹೆಚ್ಚಾಗುತ್ತದೆ ಎಂದಿತ್ತು. ಈಗ ಭಾರತದಲ್ಲಿ ಜುಲೈ ಆರಂಭದ ವೇಳೆಗೆ 6,30,000 ರಿಂದ 21 ಲಕ್ಷ ಜನರಿಗೆ  ವೈರಸ್ ಸೋಂಕು ತಗಲುತ್ತದೆ ಎಂದು ಮುಖರ್ಜಿ ತಂಡ ಅಂದಾಜಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...