ಮಹಾಮಳೆಯ ಪ್ರವಾಹಕ್ಕೆ ಚಾಲಕನೋರ್ವ ಟ್ರ್ಯಾಕ್ಟರ್ ಸಮೇತ ಕೊಚ್ಚಿ ಹೋದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ.
ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ವ್ಯಕ್ತಿಯೋರ್ವ ತುಂಬಿ ಹರಿಯುತ್ತಿದ್ದ ಹಳ್ಳವನ್ನು ಟ್ರ್ಯಾಕ್ಟರ್ ಮೂಲಕ ದಾಟಲು ಹೋಗಿದ್ದಾನೆ. ನೋಡ ನೋಡುತ್ತಿದ್ದಂತೆಯೇ ಚಾಲಕ ಟ್ರ್ಯಾಕ್ಟರ್ ಸಮೇತ ನೀರುಪಾಲಾಗಿದ್ದಾನೆ.
ಇದೇ ಟ್ರ್ಯಾಕ್ಟರ್ ನಲ್ಲಿದ್ದ ಇನ್ನೋರ್ವ ವ್ಯಕ್ತಿ ನೀರಿನಲ್ಲಿ ಈಜಿ ದಡ ಸೇರಿದ್ದಾನೆ.