alex Certify ಬಳಕೆದಾರರ ‘ಆತಂಕ’ ದೂರ ಮಾಡಿದ ವಾಟ್ಸಾಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಳಕೆದಾರರ ‘ಆತಂಕ’ ದೂರ ಮಾಡಿದ ವಾಟ್ಸಾಪ್

ಸಾಮಾಜಿಕ ಜಾಲತಾಣ ವಾಟ್ಸಾಪ್ ಭಾರತದಲ್ಲಿ ಅಪಾರ ಸಂಖ್ಯೆಯ ಬಳಕೆದಾರರನ್ನು ಹೊಂದಿದೆ. ಆದರೆ ಕೆಲದಿನಗಳ ಹಿಂದೆ ಬಹಿರಂಗವಾದ ಸುದ್ದಿಯೊಂದು ವಾಟ್ಸಾಪ್ ಬಳಕೆದಾರರಲ್ಲಿ ಕಳವಳ ಮೂಡಿಸಿತ್ತು.

ಸುಮಾರು 3 ಲಕ್ಷ ಬಳಕೆದಾರರ ದೂರವಾಣಿ ಸಂಖ್ಯೆಗಳು ಗೂಗಲ್ ಸರ್ಚ್ ನಲ್ಲಿ ಪತ್ತೆಯಾಗಿದ್ದು, ಹೀಗಾಗಿ ಖಾಸಗಿ ಮಾಹಿತಿ ಸೋರಿಕೆಯಾಗುವ ಭೀತಿಯನ್ನು ಬಳಕೆದಾರರು ವ್ಯಕ್ತಪಡಿಸಿದ್ದರು.

ಆದರೆ ಈ ಕುರಿತು ವಾಟ್ಸಾಪ್ ಸ್ಪಷ್ಟನೆ ನೀಡಿದ್ದು, ‘ಕ್ಲಿಕ್ ಟು ಚಾಟ್’ ಆಪ್ಶನ್ ಆಯ್ಕೆ ಮಾಡಿದವರ ಫೋನ್ ನಂಬರ್ ಗಳು ಮಾತ್ರ ಗೂಗಲ್ ಸರ್ಚ್ ನಲ್ಲಿ ಕಂಡುಬಂದಿದೆ. ಇದೀಗ ಆ ಲೋಪವನ್ನು ಪರಿಹರಿಸಲಾಗಿದೆ ಎಂದು ಹೇಳುವ ಮೂಲಕ ಬಳಕೆದಾರರ ಆತಂಕವನ್ನು ದೂರ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...