alex Certify ಪ್ರೀತಿಗಾಗಿ 15 ತಿಂಗಳ ಮಗು ಅಪಹರಿಸಿದ ಅಜ್ಜ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಗಾಗಿ 15 ತಿಂಗಳ ಮಗು ಅಪಹರಿಸಿದ ಅಜ್ಜ

ಸಂಬಂಧದಲ್ಲಿ ಮಗುವಿಗೆ ಅಜ್ಜನಾಗುವ ವ್ಯಕ್ತಿಯೊಬ್ಬ ಪ್ರೀತಿಗಾಗಿ 15 ತಿಂಗಳ ಮಗುವನ್ನು ಅಪಹರಿಸಿದ್ದಾನೆ. ಘಟನೆ ನಡೆದ 24 ಗಂಟೆಯಲ್ಲಿ ಮಗುವನ್ನು ಪೊಲೀಸರು ರಕ್ಷಿಸಿದ್ದಾರೆ. ಆರೋಪಿ ಫೋನ್ ಕರೆ ಮಾಡದೆ ಮೊಬೈಲ್ ಅಪ್ಲಿಕೇಷನ್ ಮೂಲಕ ಕುಟುಂಬಸ್ಥರಿಗೆ ಧಮಕಿ ಹಾಕ್ತಿದ್ದರಿಂದ ಅವನ ಪತ್ತೆ ಕಾರ್ಯ ಸ್ವಲ್ಪ ತಡವಾಯ್ತೆಂದು ಪೊಲೀಸರು ಹೇಳಿದ್ದಾರೆ.

ವಾಸ್ತವವಾಗಿ, ಆರೋಪಿ ದುಬೈನಲ್ಲಿ ವಾಸವಾಗಿದ್ದಾನೆ. ಆತನಿಗೆ ಮದುವೆಯಾಗಿದೆ. ಆದ್ರೆ ಫೇಸ್ಬುಕ್ ನಲ್ಲಿ ಕೇರಳ ಮೂಲದ ಹುಡುಗಿ ಜೊತೆ ಪ್ರೀತಿ ಚಿಗುರಿತ್ತು. ಭಾರತಕ್ಕೆ ಬಂದವನು ಮತ್ತೊಂದು ಮದುವೆಗೆ ತಯಾರಿ ನಡೆಸಿದ್ದ. ಈ ಬಗ್ಗೆ ಹುಡುಗಿ ಕುಟುಂಬದ ಜೊತೆ ಮಾತನಾಡಿ ಬರುವಂತೆ ಸಲ್ಮಾನ್ ನನ್ನು ಕಳುಹಿಸಿದ್ದ.

ವಿಚಿತ್ರವೆಂದ್ರೆ ಹುಡುಗಿ ಭೇಟಿಗೆ ಹೋಗಿದ್ದ ಸಲ್ಮಾನ್ ಕೂಡ ಹುಡುಗಿ ಸ್ನೇಹ ಬೆಳೆಸಿದ್ದಾನೆ. ಇಬ್ಬರು ಹತ್ತಿರಾಗಿದ್ದಾರೆ. ಈ ಕಾರಣಕ್ಕೆ ಹುಡುಗಿ ಆರೋಪಿಯನ್ನು ದೂರ ಮಾಡಿದ್ದಳಂತೆ. ಇದ್ರಿಂದ ಕೋಪಗೊಂಡ ಆರೋಪಿ ಸಲ್ಮಾನ್ ನ 15 ತಿಂಗಳ ಮಗುವನ್ನು ಅಪಹರಿಸಿದ್ದಾನೆ. ಫೇಸ್ಬುಕ್ ಹುಡುಗಿ ಬಿಟ್ಟರೆ ಮಗು ಬಿಡುವುದಾಗಿ ಹೇಳಿದ್ದನಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...