alex Certify ಪ್ರವಾಸ ಪ್ರಿಯ ನೌಕರರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸ ಪ್ರಿಯ ನೌಕರರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

ಕೊರೊನಾ, ಕೊರೊನಾ, ಕೊರೊನಾ….ಈ ವೈರಸ್ ಯಾವಾಗ ದೇಶವನ್ನು ಪ್ರವೇಶ ಮಾಡಿತ್ತೋ ಅಂದಿನಿಂದಲೂ ಯಾರಿಗೂ ನೆಮ್ಮದಿ ಇಲ್ಲದಂಗೆ ಆಗಿದೆ. ಮನೆಯಿಂದ ಹೊರ ಹೋಗೋವುದಕ್ಕೂ ನೂರು ಬಾರಿ ಯೋಚನೆ ಮಾಡಬೇಕಾಗಿದೆ. ಇದು ಒಂದು ಕಡೆಯಾದ್ರೆ, ಮತ್ತೊಂದು ಸರ್ಕಾರದಿಂದ ನೌಕರರಿಗೆ ಸಿಗುವ ಸೌಲಭ್ಯಗಳನ್ನೂ ಈ ಕೊರೊನಾ ಕಿತ್ತುಕೊಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಈ ಕೊರೊನಾ ಮಧ್ಯೆಯೇ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ. ಹೌದು, ಲೀವ್ ಟ್ರಾವೆಲ್ ಕನ್ಷೆಷನ್ ಯೋಜನೆ ಇನ್ಮುಂದೆ 2022ರ ಸೆಪ್ಟೆಂಬರ್ ವರೆಗೆ ಇರಲಿದೆ. ಈ ಯೋಜನೆಯನ್ನು ವಿಸ್ತರಿಸುವ ಮೂಲಕ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಖುಷಿ ವಿಚಾರ ನೀಡಿದೆ.

ಈ ಯೋಜನೆ ಅನ್ವಯ, ಜಮ್ಮು ಕಾಶ್ಮೀರ್, ಅಂಡಮಾನ್ ಮತ್ತು ನಿಕೋಬರ್, ಲಡಾಕ್ ಸೇರಿದಂತೆ ಈಶಾನ್ಯ ಭಾಗದ ರಾಜ್ಯಗಳಿಗೆ ಸರ್ಕಾರಿ ವಿಮಾನ ಅಷ್ಟೇ ಅಲ್ಲದೆ ಖಾಸಗಿ ವಿಮಾನಗಳಲ್ಲೂ ಹೋಗಬಹುದು ಎಂದು ಇಲಾಖೆ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...