alex Certify ಪೈಲಟ್ ಗೆ ಕೊರೊನಾ: ವಾಪಸ್ ಬಂದ ವಿಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೈಲಟ್ ಗೆ ಕೊರೊನಾ: ವಾಪಸ್ ಬಂದ ವಿಮಾನ

ದೆಹಲಿ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಅಧಿಕಾರಿಗಳ ನಡುವೆ ಗೊಂದಲ ನಿರ್ಮಾಣವಾಗಿತ್ತು. ಏರ್ ಇಂಡಿಯಾ ವಿಮಾನದ ಪೈಲಟ್ ಗೆ ಕೊರೊನಾ ಸೋಂಕಿರುವುದು ಪತ್ತೆಯಾಗಿದ್ದು ಇದಕ್ಕೆ ಕಾರಣವಾಗಿತ್ತು. ಏರ್ ಇಂಡಿಯಾ ವಿಮಾನ ಮಾಸ್ಕೋಗೆ ಹಾರಿತ್ತು. ವಿಮಾನ ಹಾರಾಟ ಶುರು ಮಾಡಿದ ಮೇಲೆ  ಪೈಲಟ್ ಕೊರೊನಾ ಪಾಸಿಟಿವ್ ಎಂದು ತಿಳಿದು ಬಂದಿದೆ.

ತಕ್ಷಣ ವಿಮಾನ ಸಿಬ್ಬಂದಿಯನ್ನು ಏರ್ ಟ್ರಾಫಿಕ್ ಕಂಟ್ರೋಲ್ ಮೂಲಕ ಸಂಪರ್ಕಿಸ ವಾಪಸ್ ದೆಹಲಿಗೆ ಕರೆಯಿಸಿಕೊಳ್ಳಲಾಗಿದೆ. ಈ ವೇಳೆ ವಿಮಾನವು ಉಜ್ಬೇಕಿಸ್ತಾನ್ ಮೇಲೆ ಹಾರುತ್ತಿತ್ತು ಎನ್ನಲಾಗಿದೆ.

ಮಾಹಿತಿಯ ಪ್ರಕಾರ, ಬೆಳಿಗ್ಗೆ ಪೈಲಟ್ ವರದಿಯನ್ನು ತಪ್ಪಾಗಿ ನೋಡಲಾಗಿದೆ. ಎರಡು ಗಂಟೆ ನಂತ್ರ ಮತ್ತೆ ವರದಿ ಪರಿಶೀಲಿಸಿದಾಗ ಪೈಲಟ್ ಗೆ ಕೊರೊನಾ ಸೋಂಕಿರುವುದು ಗೊತ್ತಾಗಿದೆ. ಈ ವಿಮಾನವು ರಷ್ಯಾದಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ಮರಳಿ ತರಲು ಹೊರಟಿತ್ತು.

ವಿಮಾನದಲ್ಲಿ ವಿಮಾನ ಸಿಬ್ಬಂದಿ ಮಾತ್ರ ಪ್ರಯಾಣ ಬೆಳೆಸುತ್ತಿದ್ದರು. ವಿಮಾನದ ಸಿಬ್ಬಂದಿಗೆ ಕ್ವಾರಂಟೈನ್ ಮಾಡಲಾಗಿದ್ದು, ವಿಮಾನವನ್ನು ಸ್ವಚ್ಛಗೊಳಿಸುವ ಕೆಲಸ ನಡೆದಿದೆ. ಬೇರೆ ವಿಮಾನವನ್ನು ರಷ್ಯಾಕ್ಕೆ ಕಳುಹಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...