alex Certify ಪತಿ ಎಂದು ಬಾಯ್ ಫ್ರೆಂಡ್ ಜೊತೆ ಕ್ವಾರಂಟೈನ್ ಆಗಿದ್ದ ಕಾನ್ಸ್ಟೇಬಲ್ ಬಣ್ಣ ಬಯಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಎಂದು ಬಾಯ್ ಫ್ರೆಂಡ್ ಜೊತೆ ಕ್ವಾರಂಟೈನ್ ಆಗಿದ್ದ ಕಾನ್ಸ್ಟೇಬಲ್ ಬಣ್ಣ ಬಯಲು

पति बताकर प्रेमी के साथ क्वारनटीन हो गई महिला कांस्टेबल, ऐसे खुली पोल

ಮಹಾರಾಷ್ಟ್ರದ ನಾಗ್ಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳಾ ಕಾನ್ಸ್ಟೇಬಲ್ ಪತಿ ಎನ್ನುತ್ತ ಪ್ರೇಮಿ ಜೊತೆ ಕ್ವಾರಂಟೈನ್ ಆಗಿದ್ದಾಳೆ. ಕೊನೆಗೆ ಆಕೆ ಬಣ್ಣ ಬಯಲಾಗಿದೆ.

ಮಹಿಳಾ ಕಾನ್ಸ್ಟೇಬಲ್ ಕೆಲಸ ಮಾಡ್ತಿದ್ದ ಸ್ಥಳದಲ್ಲಿ ಸಿಬ್ಬಂದಿಗೆ ಕೊರೊನಾ ಬಂದಿತ್ತು. ಹಾಗಾಗಿ ಮಹಿಳಾ ಕಾನ್ಸ್ಟೇಬಲ್ ಗೆ ಕ್ವಾರಂಟೈನ್ ಆಗುವಂತೆ ಹೇಳಲಾಯ್ತು. ಕ್ವಾರಂಟೈನ್ ಆದ ಕಾನ್ಸ್ಟೇಬಲ್ ತನ್ನ ಪತಿ ಅಂಚೆ ಕಚೇರಿಯಲ್ಲಿದ್ದಾರೆ. ಅವ್ರನ್ನು ಕ್ವಾರಂಟೈನ್ ಮಾಡಿ ಎಂದಿದ್ದಾಳೆ.

ಪತಿ ಎಂದು ಆಕೆ ಬಾಯ್ ಫ್ರೆಂಡ್ ಜೊತೆ ಕ್ವಾರಂಟೈನ್ ಆಗಿದ್ದಾಳೆ. ಆದ್ರೆ ಬಾಯ್ ಫ್ರೆಂಡ್ ಗೆ ಆಗಲೇ ಮದುವೆಯಾಗಿದ್ದು, ಮೂರು ದಿನ ಪತಿ ಮನೆಗೆ ಬರದಾಗ ಪತ್ನಿ ಪತ್ತೆ ಕಾರ್ಯ ಶುರು ಮಾಡಿದ್ದಾಳೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಕ್ವಾರಂಟೈನ್ ಸೆಂಟರ್ ಗೆ ಬಂದಿದ್ದಾಳೆ. ಅಲ್ಲಿಗೆ ಆಕೆಯನ್ನು ಬಿಟ್ಟಿಲ್ಲ. ಕಳೆದ ಒಂದು ವರ್ಷಗಳಿಂದ ಅಂಚೆ ಕಚೇರಿ ಸಿಬ್ಬಂದಿ ಜೊತೆ ಅವಿವಾಹಿತ ಮಹಿಳಾ ಕಾನ್ಸ್ಟೇಬಲ್ ಸಂಬಂಧದಲ್ಲಿದ್ದಳು ಎಂಬುದು ಗೊತ್ತಾಗಿ ಪೊಲೀಸರು ಇಬ್ಬರನ್ನು ಬೇರೆ ಬೇರೆ ಕ್ವಾರಂಟೈನ್ ಸೆಂಟರ್ ಗೆ ಶಿಫ್ಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...