alex Certify ಪತಿಯ ರಾತ್ರಿಗಳನ್ನು ಹಂಚಿಕೊಂಡ ಇಬ್ಬರು ಪತ್ನಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿಯ ರಾತ್ರಿಗಳನ್ನು ಹಂಚಿಕೊಂಡ ಇಬ್ಬರು ಪತ್ನಿಯರು

ಮುರಾದಾಬಾದ್ ನಲ್ಲಿ ವಿಚಿತ್ರ ಘಟನೆ ನಡೆದಿದೆ. ಇಬ್ಬರು ಪತ್ನಿಯರಿಗೆ ಆರ್ಥಿಕ ನೆರವಿನ ಜೊತೆಗೆ ಸಮಯವನ್ನೂ ಪತಿ ಹಂಚಿಕೊಳ್ಳಬೇಕಿದೆ. ಏಳು ಮಕ್ಕಳ ತಂದೆ ಇನ್ನೊಂದು ಮದುವೆಯಾದ್ಮೇಲೆ ಶುರುವಾದ ವಿವಾದವನ್ನು ಅಧಿಕಾರಿಗಳು ಬಗೆಹರಿಸಿದ್ದಾರೆ.

ನೌಶಾದ್ ಎಂಬಾತ ಮಮತಾಜ್ ಎಂಬಾಕೆಯನ್ನು ಮದುವೆಯಾಗಿದ್ದ. ಆಕೆಗೆ 7 ಮಕ್ಕಳು. ಆದ್ರೆ ಆಕೆ ಜೊತೆ ಮುನಿಸಿಕೊಂಡ ನೌಶಾದ್ ನಂತ್ರ ರೂಹಿ ಜೊತೆ ಮದುವೆಯಾಗಿದ್ದ. ಆಕೆಗೆ ಒಂದು ಗಂಡು ಮಗು. ನೌಶಾದ್ ಪತ್ನಿಯರ ಮಧ್ಯೆ ಗಲಾಟೆ ಶುರುವಾಗಿದೆ. ಇದು ಠಾಣೆ ಮೆಟ್ಟಿಲೇರಿದೆ.

ನೌಶಾದ್ ಜೊತೆ ಇಬ್ಬರು ಪತ್ನಿಯರನ್ನು ಕಚೇರಿಗೆ ಕರೆದ ಅಧಿಕಾರಿಗಳು ಎಲ್ಲರ ಜೊತೆ ಮಾತನಾಡಿದ್ದಾರೆ. ನೌಶಾದ್ ದೆಹಲಿಯಿಂದ ಮುರಾದಾಬಾದ್ ಗೆ ಬಂದಾಗ ಮೊದಲು ಮೊದಲ ಪತ್ನಿ ಮನೆಯಲ್ಲಿ ಒಂದು ದಿನ ಅಥವಾ ಒಂದು ರಾತ್ರಿ ಇರಬೇಕು. ನಂತ್ರ ರೂಹಿ ಮನೆಗೆ ಹೋಗಬೇಕು. ಹಾಗೆ ಮೊದಲ ಹೆಂಡತಿ ಮಕ್ಕಳಿಗೆ ಪ್ರತಿ ದಿನ ತಲಾ 3 ನೂರು ರೂಪಾಯಿಯಂತೆ ಹಣ ನೀಡಬೇಕು. ಬಟ್ಟೆ ಸೇರಿದಂತೆ ಮಕ್ಕಳ ಅಗತ್ಯತೆ ಪೂರೈಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಮೂವರೂ ಒಪ್ಪಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...