alex Certify ಪತಿಯ ಬೊಕ್ಕತಲೆ ನೋಡಿ ಶಾಕ್ ಆದ ಪತ್ನಿ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿಯ ಬೊಕ್ಕತಲೆ ನೋಡಿ ಶಾಕ್ ಆದ ಪತ್ನಿ ಮಾಡಿದ್ದೇನು ಗೊತ್ತಾ…?

ಮುಂಬೈ: ಮದುವೆ ಸಂದರ್ಭದಲ್ಲಿ ಮುಚ್ಚಿಟ್ಟ ಕೆಲ ವಿಷಯಗಳು ಮದುವೆ ಬಳಿಕ ಏನೆಲ್ಲ ಅನಾಹುತಗಳಿಗೆ ಕಾರಣವಾಗುತ್ತೆ ನೋಡಿ. ಇಲ್ಲೋರ್ವ ಯುವತಿಗೆ ತಾನು ಮದುವೆಯಾಗುತ್ತಿರುವ ಹುಡುಗ ಬೊಕ್ಕತಲೆಯವ ಎಂಬುದು ಗೊತ್ತಿರಲಿಲ್ಲ. ಮದುವೆ ಬಳಿಕ ಈ ವಿಚಾರ ತಿಳಿದು ಗಾಬರಿಯಾದ ಯುವತಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಒಂದು ತಿಂಗಳ ಹಿಂದೆ, ಚಾರ್ಟೆಡ್ ಅಕೌಂಟೆಂಟ್ ಆಗಿರುವ ಯುವತಿ ಹಾಗೂ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿರುವ ಯುವಕ ಮುಂಬೈನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಿನ ಕಳೆದಂತೆ ಪತ್ನಿಗೆ ಪತಿಯ ವಿಗ್ ರಹಸ್ಯ ಗೊತ್ತಾಗಿದೆ. ಇದರಿಂದ ಶಾಕ್ ಆದ ಪತ್ನಿ ತನ್ನ ಪತಿ ತನಗೆ ನಂಬಿಕೆ ದ್ರೋಹ ಮಾಡಿದ್ದಾನೆ. ಆತನ ತಲೆಯಲ್ಲಿ ಕೂದಲಿಲ್ಲ, ವಿಗ್ ಧರಿಸುತ್ತಿರುವುದು ನೋಡಿ ನನಗೆ ಶಾಕ್ ಆಗಿದೆ ಎಂದು ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.

ಪತಿ ತನಗೆ ಬೊಕ್ಕತಲೆ ಇರುವ ಬಗ್ಗೆ ಮದುವೆಗೆ ಮೊದಲು ಹೇಳದೇ ವಿಷಯ ಮುಚ್ಚಿಟ್ಟಿದ್ದಾನೆ. ಇದರಿಂದ ಪತಿ ಮೇಲಿನ ವಿಶ್ವಾಸ ಕಳೆದುಕೊಂಡಿದ್ದೇನೆ ಎಂದು ಆರೋಪಿಸಿ ಪತ್ನಿ ನಯಾನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...