alex Certify ನಾಮಪತ್ರ ಸಲ್ಲಿಸಲು 4 ಕೆಜಿ ಚಿನ್ನಾಭರಣ ಧರಿಸಿ ಬಂದ ಅಭ್ಯರ್ಥಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಮಪತ್ರ ಸಲ್ಲಿಸಲು 4 ಕೆಜಿ ಚಿನ್ನಾಭರಣ ಧರಿಸಿ ಬಂದ ಅಭ್ಯರ್ಥಿ

ಚೆನ್ನೈ; ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸುವ ಭರಾಟೆ ಜೋರಾಗಿದೆ. ಈ ವೇಳೆ ನಾಮಪತ್ರ ಸಲ್ಲಿಸಲು ಬರುತ್ತಿರುವ ಅಭ್ಯರ್ಥಿಗಳ ವಿಚಿತ್ರ ವರ್ತನೆ ನಗೆಗಡಲಲ್ಲಿ ತೇಲಿಸುವಂತೆ ಮಾಡುತ್ತಿದೆ.

ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲು ಆಗಮಿಸಿದ ಪಕ್ಷೇತರ ಅಭ್ಯರ್ಥಿ ಹರಿ ನಾಡಾರ್ ಎಂಬುವವರು ಬರೋಬ್ಬರಿ 4 ಕೆಜಿ ಚಿನ್ನಾಭರಣ ಧರಿಸಿಕೊಂಡು ಬಂದಿದ್ದು, ಎರಡು ಕೈಗಳಿಗೆ ಕಡಗಗಳು, ಕತ್ತಿನ ತುಂಬ ಹಗ್ಗದಂತಹ ಬಂಗಾರದ ಚೈನ್ ಹೇರಿಕೊಂಡು ಬಂದು ನಾಮಪತ್ರ ಸಲ್ಲಿಸಿದ್ದಾರೆ.

13 ತಿಂಗಳ ಮಗುವಿನ ಮೂಳೆ ಮುರಿದ ಕೇರ್ ಟೇಕರ್….!

ಪಕ್ಷೇತರ ಅಭ್ಯರ್ಥಿ ಹರಿ ನಾಡರ್ ತನ್ನ ಬಳಿ 11.2 ಕೆಜಿ ಚಿನ್ನಾಭರಣ ಇರುವುದಾಗಿ ಘೋಷಿಸಿದ್ದಾರೆ.

ಇದೇ ವೇಳೆ ಮತ್ತೋರ್ವ ಪಕ್ಷೇತರ ಅಭ್ಯರ್ಥಿ ಸಂತೋಷ್ ಎಂಬುವವರು ಕೂಡ ವಿಭಿನ್ನ ರೀತಿಯಲ್ಲಿ ಕಲ್ಲಂಗಡಿ ಹಣ್ಣು ಹೊತ್ತು ಬಂದು ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾ ಆಯೋಗ ಸಂತೋಷ್ ಅವರಿಗೆ ಹಣ್ಣಿನ ಚಿಹ್ನೆ ನೀಡಿದೆಯಂತೆ ಇದೇ ಕಾರಣಕ್ಕೆ ಕಲ್ಲಂಗಡಿ ಹಣ್ಣಿನ ಜೊತೆ ಬಂದು ನಾಮಪತ್ರ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...