alex Certify ದೇಶದಲ್ಲಿ ಒಂದು ಲಕ್ಷ ಗಡಿ ದಾಟುವತ್ತಾ ಕೊರೊನಾ ಸೋಂಕಿತರ ಸಂಖ್ಯೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದಲ್ಲಿ ಒಂದು ಲಕ್ಷ ಗಡಿ ದಾಟುವತ್ತಾ ಕೊರೊನಾ ಸೋಂಕಿತರ ಸಂಖ್ಯೆ..!

ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಮ್ಮ ರಾಜ್ಯದಲ್ಲೇ ಸಾವಿರ ಗಡಿ ದಾಟಿದೆ ಕೊರೊನಾ ಸೋಂಕಿತರ ಸಂಖ್ಯೆ. ಇನ್ನು ದೇಶದಲ್ಲಿ ನೋಡ್ತಾ ಹೋದ್ರೆ ನಿಜಕ್ಕೂ ಆಶ್ಚರ್ಯ ಹಾಗೂ ಆತಂಕವಾಗುತ್ತದೆ. ಒಂದು ಲಕ್ಷ ಗಡಿ ದಾಟಲಿದೆಯಾ ಕೊರೊನಾ ಸೋಂಕಿತರ ಸಂಖ್ಯೆ ಎಂದು ಊಹಿಸಲಾಗುತ್ತಿದೆ.

ಹೌದು, ಸದ್ಯ ನಿನ್ನೆಯ ಲೆಕ್ಕಾಚಾರದಲ್ಲೇ ದೇಶದ ಕೊರೋನಾ ಪೀಡಿತರ ಸಂಖ್ಯೆ 96 ಸಾವಿರ ದಾಟಿದೆ. ನಿನ್ನೆ ಒಂದೇ ದಿನ 5242 ಹೊಸ ಪ್ರಕರಣಗಳು ಪತ್ತೆಯಾಗಿವೆ. ನಿನ್ನೆ ಒಂದೇ ದಿನಕ್ಕೆ ದಾಖಲೆ ಮಟ್ಟದಲ್ಲಿ ಸೋಂಕಿತರ ಸಂಖ್ಯೆ ಕಂಡು ಬಂದಿದೆ. ನಿನ್ನೆಯ ಸೋಂಕಿತರ ಸಂಖ್ಯೆ ಸೇರಿದಂತೆ ದೇಶದಲ್ಲಿ ಇಲ್ಲಿಯವರೆಗೆ ಒಟ್ಟು ಸೋಂಕಿತರ ಸಂಖ್ಯೆ 96,169ಕ್ಕೆ ಏರಿಕೆಯಾಗಿದೆ.

ಇನ್ನು ನಿನ್ನೆ ಒಂದೇ ದಿನ ಕೊರೊನಾ ಬಲಿ ಪಡೆದಿದ್ದು, ಸುಮಾರು 157 ಮಂದಿಯನ್ನ. ಇಲ್ಲಿಯವರೆಗೆ ದೇಶದಲ್ಲಿ ಕರೋನಾದಿಂದ ಸತ್ತವರ ಸಂಖ್ಯೆ 3,029 ಕ್ಕೆ ಏರಿಕೆಯಾಗಿದೆ.

ಈ ಮೂಲಕ ಜಾಗತಿಕವಾಗಿ ಕೊರೋನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಈಗ ಭಾರತವು 11ನೇ ಸ್ಥಾನ ತಲುಪಿದೆ. ಇದನ್ನು ನೋಡುತ್ತಿದ್ದರೆ ನಾಳೆಯೊಳಗಾಗಿ ಕೊರೊನಾ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟುತ್ತಾ ಎಂಬ ಅನುಮಾನ ಕಾಡತೊಡಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...