alex Certify ಗೋ ರಕ್ಷಣೆಗೆ ಸೆಸ್ ವಿಧಿಸಲು ಮುಂದಾದ ಮಧ್ಯಪ್ರದೇಶ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋ ರಕ್ಷಣೆಗೆ ಸೆಸ್ ವಿಧಿಸಲು ಮುಂದಾದ ಮಧ್ಯಪ್ರದೇಶ ಸರ್ಕಾರ

ಗೋವುಗಳ ರಕ್ಷಣೆಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಮುಂದಾಗಿರುವ ಮಧ್ಯಪ್ರದೇಶ ಸರ್ಕಾರ ಇದಕ್ಕಾಗಿ ಆರ್ಥಿಕ ಸಂಪನ್ಮೂಲ ಹೊಂದಿಸಿಕೊಳ್ಳಲು ಗೋವಿನ ಮೇಲ್ತೆರಿಗೆ ವಿಧಿಸಲು ನಿರ್ಧರಿಸಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಈ ವಿಷಯವನ್ನು ತಿಳಿಸಿದ್ದು, ಒಂದೊಮ್ಮೆ ಈ ತೆರಿಗೆ ಜಾರಿಗೊಳಿಸಿದರೆ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸಾಲಿಗೆ ಸೇರಿಕೊಂಡಂತಾಗುತ್ತದೆ.

ಗೋವುಗಳ ರಕ್ಷಣೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದ ಬಳಿಕ ರಾಜ್ಯದಾದ್ಯಂತ 2000 ಗೋ ಶಾಲೆಗಳನ್ನು ಸ್ಥಾಪಿಸಿ ವಿವಿಧ ತಳಿಗಳನ್ನು ರಕ್ಷಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...