alex Certify ಗುಡ್ ನ್ಯೂಸ್: ಮತ್ತೆ ಇಳಿಕೆ ಕಂಡ ಕೊರೊನಾ ಸೋಂಕಿತರ ಸಂಖ್ಯೆ – 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೇಸ್ ಎಷ್ಟು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್ ನ್ಯೂಸ್: ಮತ್ತೆ ಇಳಿಕೆ ಕಂಡ ಕೊರೊನಾ ಸೋಂಕಿತರ ಸಂಖ್ಯೆ – 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೇಸ್ ಎಷ್ಟು ಗೊತ್ತಾ….?

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 71 ಲಕ್ಷ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 66,732 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 71,20,539 ಕ್ಕೆ ಏರಿಕೆಯಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ ಕಳೆದ 24 ಗಂಟೆಯಲ್ಲಿ 816 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1,09,150ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ 8,61,853 ಕೊವಿಡ್ ಸಕ್ರಿಯ ಪ್ರಕರಣಗಳಿದ್ದು, 61,49,536 ಸೋಂಕಿತರು ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ನಿನ್ನೆ ಒಂದೇ ದಿನ 9,94,851 ಜನರಿಗೆ ಕೊವಿಡ್ ಸ್ಯಾಂಪಲ್ ಟೆಸ್ಟ್ ಮಾಡಿಸಲಾಗಿದ್ದು, ಈವರೆಗೆ ದೇಶದಲ್ಲಿ 8,78,72,093 ಜನರಿಗೆ ಕೊವಿಡ್ ಪರೀಕ್ಷೆಗೆ ಒಳಪಡಿಸಲಾಗಿ ಎಂದು ಐ ಸಿ ಎಂ ಆರ್ ಮಾಹಿತಿ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...