alex Certify ಗುಡ್‌ ನ್ಯೂಸ್: 8ನೇ ತರಗತಿ ಪಾಸ್ ಆದವರಿಗೆ ಇಲ್ಲಿದೆ ʼಉದ್ಯೋಗವಕಾಶʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್‌ ನ್ಯೂಸ್: 8ನೇ ತರಗತಿ ಪಾಸ್ ಆದವರಿಗೆ ಇಲ್ಲಿದೆ ʼಉದ್ಯೋಗವಕಾಶʼ

ಭಾರತೀಯ ಸೇನೆಯು ವಿವಿಧ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಇದಕ್ಕಾಗಿ 8 ನೇ ತರಗತಿ ಪಾಸ್ ಆದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.  ಭಾರತೀಯ ಸೇನೆಯು ಎರಡು ರಾಜ್ಯಗಳಲ್ಲಿ ನೇಮಕಾತಿಗಾಗಿ ಸೇನಾ ರ್ಯಾಲಿಯನ್ನು ಆಯೋಜಿಸಲಿದೆ. ಇದರಲ್ಲಿ ಹರಿಯಾಣದ ರೇವಾಡಿಯಲ್ಲಿ ಒಂದು ರ್ಯಾಲಿ ನಡೆದ್ರೆ  ಎರಡನೇ ರ್ಯಾಲಿ  ಲಡಾಖ್‌ನ ಕಾರ್ಗಿಲ್‌ನಲ್ಲಿ ನಡೆಯಲಿದೆ.

ಹರಿಯಾಣದಲ್ಲಿ ನಡೆಯಲಿರುವ ರ್ಯಾಲಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜೂನ್ 15 ರವರೆಗೆ ಅರ್ಜಿ ಸಲ್ಲಿಸಬಹುದು. ಈ ಸೇನಾ ನೇಮಕಾತಿ ರ್ಯಾಲಿಯನ್ನು ಹರಿಯಾಣದ ರೇವಾಡಿಯ ರಾವ್ ತುಲಾ ರಾಮ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು. ರ್ಯಾಲಿ ಜುಲೈ 1 ರಿಂದ ಜುಲೈ 14 ರವರೆಗೆ ನಡೆಯಲಿದೆ.

ಜೂನ್ 10 ರೊಳಗೆ ಕಾರ್ಗಿಲ್‌ನಲ್ಲಿ ನಡೆಯುವ ರ್ಯಾಲಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕಾರ್ಗಿಲ್‌ನ ಆರ್ಮಿ ಹೆಲಿಪ್ಯಾಡ್ ಮೈದಾನದಲ್ಲಿ ಜೂನ್ 26 ರಿಂದ ಜೂನ್ 30 ರವರೆಗೆ ರ್ಯಾಲಿ ಆಯೋಜಿಸಲಾಗುವುದು. ಎರಡೂ ರಾಜ್ಯಗಳಲ್ಲಿ ನಡೆಯಲಿರುವ ಸೇನಾ ರ್ಯಾಲಿಯಡಿ ಎಲ್ಲಾ ಹುದ್ದೆಗಳಿಗೆ ವಿಭಿನ್ನ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, 8, 10 ಮತ್ತು 12ನೇ ತರಗತಿ  ಪಾಸ್ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...