alex Certify ಕೊರೊನಾ ಮಾರಿಗೆ ಬಲಿಯಾದವರನ್ನ ನೆನೆದು ಭಾವುಕರಾದ ಪ್ರಧಾನಿ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮಾರಿಗೆ ಬಲಿಯಾದವರನ್ನ ನೆನೆದು ಭಾವುಕರಾದ ಪ್ರಧಾನಿ ಮೋದಿ

ಕೊರೊನಾದಿಂದ ಮೃತರಾದವರನ್ನ ನೆನೆದು ಪ್ರಧಾನ ನರೇಂದ್ರ ಮೋದಿ ಭಾವುಕರಾಗಿದ್ದಾರೆ. ಈ ವೈರಸ್​ ನಮಗೆ ಆತ್ಮೀಯರಾಗಿದ್ದ ಅನೇಕರನ್ನ ಬಲಿ ಪಡೆದಿದೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ವಾರಣಾಸಿಯ ವೈದ್ಯರು ಹಾಗೂ ಮುಂಚೂಣಿ ಕಾರ್ಯಕರ್ತರ ಜೊತೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿ ಮೋದಿ ಜಹಾ ಬಿಮಾರ್​, ವಹಿ ಉಪಚಾರ್ ( ಎಲ್ಲಿ ಕಾಯಿಲೆ ಇರುತ್ತದೆಯೋ ಅಲ್ಲೆಲ್ಲ ಮನೆ ಬಾಗಿಲಿಗೇ ಚಿಕಿತ್ಸೆ) ಎಂಬ ಸಂದೇಶವನ್ನ ಸಾರಿದ್ರು. ಈ ರೀತಿ ಮಾಡೋದ್ರಿಂದ ಕೊರೊನಾ 2ನೇ ಅಲೆಯಿಂದ ದೇಶದಲ್ಲಿ ವೈದ್ಯಕೀಯ ಲೋಕದ ಮೇಲಿರುವ ಒತ್ತಡವನ್ನ ಕಡಿಮೆ ಮಾಡುತ್ತದೆ ಎಂದು ಹೇಳಿದ್ರು.

ಅಲ್ಲದೇ ಕೊರೊನಾ ಎರಡನೆ ಅಲೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ, ಈ ವೈರಸ್​ನಿಂದಾಗಿ ನಮ್ಮ ಪ್ರೀತಿಪಾತ್ರರು ನಮ್ಮನ್ನ ಅಗಲಿದ್ದಾರೆ ಎಂದು ಹೇಳುತ್ತಾ ಭಾವುಕರಾದ್ರು.

ವಾರಣಾಸಿ ಕ್ಷೇತ್ರದ ಸಂಸದರಾಗಿರುವ ಪ್ರಧಾನಿ ಮೋದಿ ಅಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ ಸಂಬಂಧ ಕಳವಳ ವ್ಯಕ್ತಪಡಿಸಿದ್ರು. ಮಾತ್ರವಲ್ಲದೇ ಯಾವುದೇ ಕಾರಣಕ್ಕೂ ಕೊರೊನಾ ನಿರ್ಬಂಧಗಳನ್ನ ಸಡಿಲಿಸಬಾರದು. ಉತ್ತರ ಪ್ರದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೂ ಸಹ ಜನರು ಎಚ್ಚರಿಕೆಯಿಂದ ಎಲ್ಲಾ ಕೋವಿಡ್​ ಮಾನದಂಡಗಳನ್ನ ಪಾಲಿಸದಿರೋದನ್ನ ಮರೆಯದಿರಿ ಎಂದು ಮನವಿ ಮಾಡಿದ್ದಾರೆ.

— DD News (@DDNewslive) May 21, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...