alex Certify ‘ಕೊರೊನಾ’ದಿಂದ ರಕ್ಷಣೆಗಾಗಿ ಬೆಳ್ಳಿ ಮಾಸ್ಕ್ ರೆಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ದಿಂದ ರಕ್ಷಣೆಗಾಗಿ ಬೆಳ್ಳಿ ಮಾಸ್ಕ್ ರೆಡಿ…!

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಇದಕ್ಕೆ ಲಸಿಕೆ ಇನ್ನೂ ಲಭ್ಯವಾಗದ ಕಾರಣ ಇದರಿಂದ ಪಾರಾಗಲು ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ಅಲ್ಲದೆ ಸಾಮಾಜಿಕ ಅಂತರ ಕಾಪಾಡುವಂತೆ ಸೂಚಿಸಲಾಗಿದೆ.

ಇದು ಮದುವೆಗಳ ಮೇಲೂ ಪರಿಣಾಮ ಬೀರಿದ್ದು, ಈ ಶುಭ ಸಮಾರಂಭದ ವೇಳೆ ಸೀಮಿತ ಮಂದಿಗೆ ಮಾತ್ರ ಹಾಜರಾಗುವ ಅವಕಾಶ ಸಿಗುತ್ತಿದೆ. ಅಲ್ಲದೆ ವಧು – ವರ ಸೇರಿದಂತೆ ಮದುವೆಗೆ ಹಾಜರಾಗುವ ಎಲ್ಲರೂ ಮಾಸ್ಕ್ ಧರಿಸಬೇಕಾಗುತ್ತದೆ.

ಇದರ ಮಧ್ಯೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿನ ಆಭರಣ ತಯಾರಕರೊಬ್ಬರು ಮಾಡಿರುವ ಐಡಿಯಾ ಎಲ್ಲರ ಗಮನ ಸೆಳೆದಿದೆ. ಸಂದೀಪ್ ಸಾಂಗಾವಕರ ಎಂಬವರು ಈಗ 50 ಗ್ರಾಂ ತೂಕದ ಬೆಳ್ಳಿ ಮಾಸ್ಕ್ ತಯಾರಿಸಿದ್ದು, ಇದು ವಧು – ವರರನ್ನು ಆಕರ್ಷಿಸಿದೆ. 2,500 ರೂ. ಬೆಲೆಯ ಈ ಮಾಸ್ಕ್ ಗೆ ಈಗಾಗಲೇ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು, ವಾರದೊಳಗೆ ಮೂರು ಜೋಡಿ ಮಾಸ್ಕ್ ಖರೀದಿಯಾಗಿದೆಯಂತೆ. ಮುಂದಿನ ದಿನಗಳಲ್ಲಿ ವಧು-ವರ ಮಾತ್ರವಲ್ಲದೆ ಇತರೆಯವರೂ ಇದಕ್ಕೆ ಬೇಡಿಕೆ ಸಲ್ಲಿಸಬಹುದು ಎಂಬ ನಿರೀಕ್ಷೆ ಇದರ ತಯಾರಕರದ್ದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...