alex Certify ಆನ್ ಲೈನ್ ತರಗತಿ ವೇಳೆ ಅಶ್ಲೀಲ ಚಿತ್ರ ಹರಿಬಿಟ್ಟ ವಿದ್ಯಾರ್ಥಿನಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ ಲೈನ್ ತರಗತಿ ವೇಳೆ ಅಶ್ಲೀಲ ಚಿತ್ರ ಹರಿಬಿಟ್ಟ ವಿದ್ಯಾರ್ಥಿನಿಯರು

ಕೊರೊನಾದಿಂದಾಗಿ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಶಾಲಾ – ಕಾಲೇಜುಗಳು ಮುಚ್ಚಿವೆ. ಹೀಗಾಗಿ‌ ಮಕ್ಕಳಿಗೆ ಪಠ್ಯದಲ್ಲಿ ಹಿಂದೆ ಆಗಬಾರದು ಎಂಬ ಕಾರಣಕ್ಕೆ ಆನ್ ಲೈನ್ ನಲ್ಲಿ ತರಗತಿಗಳನ್ನು ನಡೆಸುತ್ತಿದ್ದಾರೆ. ಆದರೆ ಈ ತರಗತಿಗಳನ್ನು ನಡೆಸುವ ವೇಳೆ ದೊಡ್ಡ ಅನಾಹುತವೊಂಂದು ನಡೆದು ಹೋಗಿದೆ.

ಹೌದು, ಉತ್ತರ ಪ್ರದೇಶದ ಆಜಂಗಡ್ ನಲ್ಲಿರುವ ಒಂದು ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಆನ್ ಲೈನ್ ನಲ್ಲಿ ಪಾಠ ಮಾಡುತ್ತಿರುವಾಗ ಇಬ್ಬರು ವಿದ್ಯಾರ್ಥಿನಿಯರು ಟೀಚರ್ ವಿರುದ್ಧ ಅಸಭ್ಯ ಭಾಷೆಯಲ್ಲಿ ಮಾತನಾಡಿದ್ದಾರೆ. ಜೊತೆಗೆ ಅಶ್ಲೀಲ ಮೆಸೇಜ್ ಹಾಗೂ ಪೋರ್ನ್ ವಿಡಿಯೋಗಳನ್ನು ಸಹ ಹರಿಬಿಟ್ಟಿದ್ದಾರೆ.

ಇಬ್ಬರು ವಿದ್ಯಾರ್ಥಿನಿಯರು ಒತ್ತಾಯದ ಮೇಲೆ ಗ್ರೂಪ್ ಗೆ ಸೇರಿಕೊಂಡು ಈ ರೀತಿ ಮಾಡಿದ್ದಾರೆ ಎಂದು ಶಿಕ್ಷಕಿ ಪ್ರಾಂಶುಪಾಲರಿಗೆ ವಿವರಿಸಿದ್ದು, ಈ ಘಟನೆ ಬಗ್ಗೆ ಶಿಕ್ಷಕಿ ಹಾಗೂ ಪ್ರಾಂಶುಪಾಲರು ಪೊಲೀಸರಿಗೆ ದೂರು ನೀಡಿದ್ದಾರೆ‌.

ದೂರಿನನ್ವಯ ಇಬ್ಬರು ವಿದ್ಯಾರ್ಥಿನಿಯರ ಪೋಷಕರನ್ನು ವಿಚಾರಣೆ ಮಾಡಿದ ಪೊಲೀಸರು ಅವರ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇನ್ನು ಈ ವಿದ್ಯಾರ್ಥಿನಿಯರು ಅದೇ ಶಾಲೆಯವರು ಎಂದು ತಿಳಿದು ಬಂದಿದೆ. ಈ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...