alex Certify ಆನ್ ಲೈನ್ ಕೋಚಿಂಗ್ ವೇಳೆ ಪ್ರಸಾರವಾಯ್ತು ‘ನೀಲಿ ಚಿತ್ರ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ ಲೈನ್ ಕೋಚಿಂಗ್ ವೇಳೆ ಪ್ರಸಾರವಾಯ್ತು ‘ನೀಲಿ ಚಿತ್ರ’

ಕರೋನಾ ವೈರಸ್ ಕಾರಣಕ್ಕಾಗಿ ದೇಶದಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಶಿಕ್ಷಣ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಆನ್ಲೈನ್ ಕೋಚಿಂಗ್ ನಡೆಯುತ್ತಿದೆ.

ಆದರೆ ಈ ಆನ್ಲೈನ್ ಕೋಚಿಂಗ್ ಸಂದರ್ಭದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ಸಂಬಂಧಪಟ್ಟವರನ್ನು ಮುಜುಗರಕ್ಕೆ ಸಿಲುಕಿಸುತ್ತಿವೆ. ಕೆಲವು ದಿನಗಳ ಹಿಂದೆ ಆನ್ಲೈನ್ ಕೋಚಿಂಗ್ ವೇಳೆ ವಿದ್ಯಾರ್ಥಿಯೊಬ್ಬ ಹಸ್ತ ಮೈಥುನ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು, ಇದೀಗ ಮತ್ತೊಂದು ಮುಜುಗರದ ಘಟನೆ ನಡೆದಿದೆ.

ದೇಶದ ವಿವಿಧೆಡೆಗಳ ತರಬೇತುದಾರಿಗಾಗಿ ಹೈದರಾಬಾದ್ ನಲ್ಲಿ ಏರ್ಪಡಿಸಿದ್ದ ಆನ್ಲೈನ್ ಬ್ಯಾಡ್ಮಿಂಟನ್ ಕೋಚಿಂಗ್ ವೇಳೆ ಕೆಲವೊತ್ತು ಇದ್ದಕ್ಕಿದ್ದಂತೆ ನೀಲಿಚಿತ್ರ ಪ್ರಸಾರಗೊಂಡಿದೆ. ಇದರಿಂದಾಗಿ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಸೇರಿದಂತೆ ಹಾಜರಿದ್ದ ಹಲವರು ದಿಗ್ಬ್ರಮೆಗೊಳಗಾಗಿದ್ದಾರೆ. ನಂತರ ತಕ್ಷಣವೇ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...