alex Certify ಅಹಮದಾಬಾದ್​ನಲ್ಲಿ ರಾಸಾಯನಿಕ ಬಾಯ್ಲರ್​ ಸ್ಫೋಟ: 9 ಮಂದಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಹಮದಾಬಾದ್​ನಲ್ಲಿ ರಾಸಾಯನಿಕ ಬಾಯ್ಲರ್​ ಸ್ಫೋಟ: 9 ಮಂದಿ ಸಾವು

ಅಹಮದಾಬಾದ್​ನ ಪಿರಾನಾ – ಪಿಪ್ಲಾಜ್​ ರಸ್ತೆಯಲ್ಲಿರುವ ಕಾರ್ಖಾನೆಯಲ್ಲಿ ರಾಸಾಯನಿಕ ಬಾಯ್ಲರ್​ ಸ್ಫೋಟಗೊಂಡ ಪರಿಣಾಮ 9 ಜನ ಸಾವನ್ನಪ್ಪಿದ್ದಾರೆ ಹಾಗೂ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಚಾವಣಿ ಕುಸಿದ ಪರಿಣಾಮ ಕಟ್ಟಡದೊಳಗೆ ಕಾರ್ಮಿಕರು ಸಿಲುಕಿದ್ದಾರೆ. ರಕ್ಷಣಾ ಪಡೆಗಳ ನೆರವಿನಿಂದ ಹಲವು ಕಾರ್ಮಿಕರನ್ನ ರಕ್ಷಣೆ ಮಾಡಲಾಗಿದೆ. ಅಗ್ನಿಶಾಮಕ ವಿಭಾಗದ 60ಕ್ಕೂ ಹೆಚ್ಚು ಸಿಬ್ಬಂದಿ 24 ಹೆಚ್ಚು ಅಗ್ನಿಶಾಮಕ ವಿಭಾಗದ ವಾಹನಗಳನ್ನ ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಬುಧವಾರ ನಡೆದ ದುರಂತದ ವಿಚಾರವಾಗಿ ಮಾತನಾಡಿದ ಅಗ್ನಿಶಾಮಕ ದಳದ ಅಧಿಕಾರಿ ಎಂ.ಎಫ್.​ ದಸ್ತೂರ್, ರಕ್ಷಣಾ ಕಾರ್ಯಾಚರಣೆಯಲ್ಲಿ 6 ಮಂದಿಯನ್ನ ಬಚಾವ್​ ಮಾಡಿದ್ದೇವೆ. ಹಾಗೂ ಅವರೆಲ್ಲ ಈಗ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಇಬ್ಬರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಅಂತಾ ಮಾಹಿತಿ ನೀಡಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...