alex Certify ಅತ್ಯಾಚಾರದ ನಂತ್ರ ಅಶ್ಲೀಲ ವಿಡಿಯೋ ಮಾಡಿದ್ದವನಿಂದ ಬ್ಲಾಕ್ಮೇಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಾಚಾರದ ನಂತ್ರ ಅಶ್ಲೀಲ ವಿಡಿಯೋ ಮಾಡಿದ್ದವನಿಂದ ಬ್ಲಾಕ್ಮೇಲ್

ಕಿರಾಣಿ ಅಂಗಡಿಗೆ ಆಗಾಗ ಬರ್ತಿದ್ದ ಸೈನಿಕನೊಬ್ಬ ಅಂಗಡಿ ಮಾಲೀಕನ ಪತ್ನಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಅದ್ರ ವಿಡಿಯೋ ತೆಗೆದು ಬ್ಲಾಕ್ಮೇಲ್ ಶುರು ಮಾಡಿದ್ದಾನೆ. ಆರು ತಿಂಗಳು ಹಿಂಸೆ ನೀಡಿದ ಸೈನಿಕನ ವಿರುದ್ಧ ದನಿ ಎತ್ತಿದ ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ.

ಆರೋಪಿ ಅಮಿತ್ ಕುಮಾರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಕಿರಾಣಿ ಅಂಗಡಿ ಹಿಂದಿದ್ದ ಮನೆಗೆ ಬಂದ ಸೈನಿಕ ಮೊದಲು ಮಹಿಳೆ ಅಶ್ಲೀಲ ಫೋಟೊ ತೆಗೆದಿದ್ದಾನೆ. ನಂತ್ರ ಬ್ಲಾಕ್ಮೇಲ್ ಶುರು ಮಾಡಿದ್ದಾನೆ. ಕಳೆದ 6 ತಿಂಗಳಿಂದ ಮಹಿಳೆ ಮನೆಗೆ ಆಗಾಗ ಬರ್ತಿದ್ದ ಸೈನಿಕ ಆಕೆ ಮೇಲೆ ಅತ್ಯಾಚಾರವೆಸಗಿದ್ದನಂತೆ. ವಿಡಿಯೋ ಕೂಡ ಮಾಡಿ ಬೆದರಿಸಿದ್ದನಂತೆ.

ಕಳೆದ ಎರಡು ದಿನಗಳ ಹಿಂದೆ ಸೈನಿಕನ ಕೃತ್ಯ ಪತಿ ಕಣ್ಣಿಗೆ ಬಿದ್ದಿದೆ. ನಂತ್ರ ಪತ್ನಿ ವಿಷ್ಯವನ್ನು ಪತಿಗೆ ಹೇಳಿದ್ದಾಳೆ. ಇಬ್ಬರು ಸೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೈನಿಕನ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪೀಡಿತೆ ಪತಿ ಆಗ್ರಹಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...