alex Certify ದೇಶದ ಜನತೆಗೆ ಮತ್ತೊಂದು ಶಾಕ್: ಜುಲೈ-ಆಗಸ್ಟ್ ನಲ್ಲಿ ಮತ್ತೆ ವಿದ್ಯುತ್ ಬಿಕ್ಕಟ್ಟಿನತ್ತ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಜನತೆಗೆ ಮತ್ತೊಂದು ಶಾಕ್: ಜುಲೈ-ಆಗಸ್ಟ್ ನಲ್ಲಿ ಮತ್ತೆ ವಿದ್ಯುತ್ ಬಿಕ್ಕಟ್ಟಿನತ್ತ ಭಾರತ

ನವದೆಹಲಿ: ಭಾರತದಲ್ಲಿನ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಡಿಮೆ ಪ್ರಮಾಣದಲ್ಲಿರುವ ಕಲ್ಲಿದ್ದಲು ಸಂಗ್ರಹಣೆಯಿಂದಾಗಿ ಜುಲೈ-ಆಗಸ್ಟ್‌ ನಲ್ಲಿ ಮತ್ತೊಂದು ವಿದ್ಯುತ್ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂದು ಸ್ವತಂತ್ರ ಸಂಶೋಧನಾ ಸಂಸ್ಥೆ CREA ಹೇಳಿದೆ.

ಮುಂಗಾರು ಪೂರ್ವದಲ್ಲಿ ಪ್ರಸ್ತುತ ಕಲ್ಲಿದ್ದಲು ದಾಸ್ತಾನು ಪಿಟ್ ಹೆಡ್ ಪವರ್ ಸ್ಟೇಷನ್‌ ಗಳಲ್ಲಿ 13.5 ಮಿಲಿಯನ್ ಟನ್‌ ಗಳಷ್ಟಿದೆ. ದೇಶಾದ್ಯಂತ ಎಲ್ಲಾ ವಿದ್ಯುತ್ ಸ್ಥಾವರಗಳಲ್ಲಿ ಒಟ್ಟು 20.7 MT ಇದೆ. ಕಲ್ಲಿದ್ದಲು ವಿದ್ಯುತ್ ಸ್ಥಾವರಗಳು ವಿದ್ಯುತ್ ಬೇಡಿಕೆಯಲ್ಲಿ ಅಲ್ಪ ಪ್ರಮಾಣದ ಏರಿಕೆಯನ್ನು ಸಹ ಪೂರೈಸಲು ಸಾಧ್ಯವಿಲ್ಲ ಎಂದು ಅಧಿಕೃತ ಅಂಕಿ ಅಂಶಗಳು ಸೂಚಿಸುತ್ತವೆ. ಕಲ್ಲಿದ್ದಲು ಸಾಗಣೆ, ಸಂಗ್ರಹಣೆ ಬಗ್ಗೆ ತುರ್ತು ಕ್ರಮದ ಅವಶ್ಯಕತೆಯಿದೆ ಎಂದು ಇಂಧನ ಮತ್ತು ಶುದ್ಧ ಗಾಳಿಯ ಸಂಶೋಧನಾ ಕೇಂದ್ರ(CREA) ಹೇಳಿದೆ.

ಭಾರತೀಯ ಕೇಂದ್ರೀಯ ವಿದ್ಯುತ್ ಪ್ರಾಧಿಕಾರ(CEA) ಆಗಸ್ಟ್‌ ನಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ 214 GW ರಷ್ಟು ಇರಲಿದೆ ಎಂದು ಭವಿಷ್ಯ ನುಡಿದಿದೆ. ಹೆಚ್ಚುವರಿಯಾಗಿ ಸರಾಸರಿ ಬೇಡಿಕೆಯು ಮೇ ತಿಂಗಳಿಗಿಂತ 1,33,426 ಮಿಲಿಯನ್ ಯೂನಿಟ್‌ ಗಳಿಗೆ ಹೆಚ್ಚಾಗಬಹುದು. ನೈಋತ್ಯ ಮಾನ್ಸೂನ್‌ ವೇಳೆ ಗಣಿಗಾರಿಕೆ ಮತ್ತು ಗಣಿಗಳಿಂದ ವಿದ್ಯುತ್ ಕೇಂದ್ರಗಳಿಗೆ ಕಲ್ಲಿದ್ದಲಿನ ಸಾಗಣೆಗೆ ಮತ್ತಷ್ಟು ಅಡ್ಡಿಯಾಗಲಿದೆ. ಮಾನ್ಸೂನ್‌ ಗೆ ಮೊದಲು ಕಲ್ಲಿದ್ದಲು ದಾಸ್ತಾನು ಮಾಡಿಕೊಳ್ಳದಿದ್ದರೆ ಜುಲೈ-ಆಗಸ್ಟ್ ನಲ್ಲಿ ದೇಶವು ಮತ್ತೊಂದು ವಿದ್ಯುತ್ ಬಿಕ್ಕಟ್ಟಿನತ್ತ ಸಾಗಬಹುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...