alex Certify ಭರ್ಜರಿ ಜಯದೊಂದಿಗೆ ಶುಭಾರಂಭ ಮಾಡಿದ ಭಾರತೀಯ ಕಿರಿಯರ ಕ್ರಿಕೆಟ್ ತಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಜಯದೊಂದಿಗೆ ಶುಭಾರಂಭ ಮಾಡಿದ ಭಾರತೀಯ ಕಿರಿಯರ ಕ್ರಿಕೆಟ್ ತಂಡ

U-19 ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತೀಯ ಕಿರಿಯರ ತಂಡ ತಾನಾಡಿದ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಭರ್ಜರಿಯಾಗಿ ಜಯ ಗಳಿಸಿದ್ದು, ಗೆಲುವಿನ ಮೂಲಕ ಶುಭಾರಂಭ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು ನಿಗದಿತ ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 282 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಯುಎಇ ತಂಡವು ಕೇವಲ 34.3 ಓವರ್ ಗಳಲ್ಲಿ 128 ರನ್ ಗಳಿಸಿ, ತನ್ನೆಲ್ಲ ವಿಕೆಟ್ ಒಪ್ಪಿಸಿತು. ಈ ಮೂಲಕ ಭಾರತ ತಂಡವು 154 ರನ್ ಗಳ ಭರ್ಜರಿ ಜಯ ಸಾಧಿಸಿತು.

ಭಾರತದ ಆರಂಭ ಉತ್ತಮವಾಗಿತ್ತು. ಹರ್ನೂರ್ ಸಿಂಗ್ 120 ರನ್ ಸಿಡಿಸಿ ಮಿಂಚಿದರು. ನಾಯಕ ಯಶ್ ಧುಲ್ 68 ಎಸೆತಗಳಲ್ಲಿ 63 ರನ್ ಸಿಡಿಸಿದರು. ಅಲ್ಲದೇ, ಹರ್ನೂರ್ ಸಿಂಗ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ರಾಜವರ್ಧನ್ ಹಂಗಾರ್ಗೆಕರ್ 3 ವಿಕೆಟ್ ಕಬಳಿಸಿದ್ದಲ್ಲದೆ, ಬ್ಯಾಟಿಂಗ್ ನಲ್ಲಿಯೂ 48 ರನ್ ಗಳಿಸಿ ಮಿಂಚಿದರು.

ಮುಂಬರುವ ದಿನಗಳಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಗಾಗಿ ಭಾರತಕ್ಕೆ ಈ ಸರಣಿ ಮಹತ್ವ ಪಡೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...