alex Certify ಗ್ರಾಂಡ್ ಕ್ಯಾನನ್ ಮೇಲೆ ಮಿಂಚಿನ ಹೊಡೆತ; ಪ್ರಕೃತಿ ವಿಸ್ಮಯದ ಅದ್ಭುತ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಂಡ್ ಕ್ಯಾನನ್ ಮೇಲೆ ಮಿಂಚಿನ ಹೊಡೆತ; ಪ್ರಕೃತಿ ವಿಸ್ಮಯದ ಅದ್ಭುತ ವಿಡಿಯೋ ವೈರಲ್

ಯುನೈಟೆಡ್ ಸ್ಟೇಟ್ಸ್‌ನ ಗ್ರ್ಯಾಂಡ್ ಕ್ಯಾನನ್ ನಲ್ಲಿ ಮಳೆ, ಗುಡುಗು, ಮಿಂಚಿನ ಅಬ್ಬರದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಗ್ರಾಂಡ್ ಕ್ಯಾನನ್ ರಾಷ್ಟ್ರೀಯ ಉದ್ಯಾನವನದ ಫೇಸ್ಬುಕ್ ಪುಟ ಚಂಡಮಾರುತದ 1 ನಿಮಿಷ, 27 ಸೆಕೆಂಡುಗಳ ವಿಡಿಯೊವನ್ನು ಹಂಚಿಕೊಂಡಿದ್ದು, ಇದು ನೆಟ್ಟಿಗರಲ್ಲಿ ಅಚ್ಚರಿ ಹುಟ್ಟಿಸಿದೆ.

ಗ್ರಾಂಡ್ ಕ್ಯಾನನ್ ದಕ್ಷಿಣ ರಿಮ್ನ ವ್ಯೂ ಪಾಯಿಂಟ್ಗೆ ಅಭಿಮುಖವಾಗಿ ಈ ವಿಡಿಯೋ ತೆಗೆದುಕೊಳ್ಳಲಾಗಿದೆ.

ಗ್ರಾಂಡ್ ಕ್ಯಾನನ್ ನ್ನಲ್ಲಿ ಸೂರ್ಯಾಸ್ತವನ್ನು ವೀಕ್ಷಿಸಲು ವರ್ಷದ ಅತ್ಯುತ್ತಮ ಸಮಯವೆಂದರೆ ಬೇಸಿಗೆಯ ಮಾನ್ಸೂನ್. ಭಾರೀ ಮಳೆ ಮತ್ತು ಮಿಂಚಿನ ಬೆಳಕನ್ನು ನೋಡುವುದೇ ಅದ್ಭುತ. ವ್ಯೂ ಪಾಯಿಂಟ್ ಬಳಿ ನೇರಳೆ ಮತ್ತು ಗೋಲ್ಡನ್ ಬಣ್ಣದಲ್ಲಿ ಕಾಣಿಸಿಕೊಂಡು ಆಕಾಶವನ್ನು ನೋಡುವುದೇ ಒಂದು ಸೌಭಾಗ್ಯ ಎನ್ನಬೇಕು.

ಆ ವೀಡಿಯೊದಲ್ಲಿ, ಮಿಂಚಿನ ಗೆರೆಗಳನ್ನು ಕಾಣಬಹುದು. ಇದಲ್ಲದೆ, ಇಡೀ ವೀಡಿಯೊದಲ್ಲಿ ಗುಡುಗು ಸದ್ದು ಕೇಳಿಸುತ್ತದೆ. ದಟ್ಟವಾದ ಮೋಡಗಳು ಕರಗಲು ಪ್ರಾರಂಭಿಸಿದಾಗ ಒಂದು ಹಂತದಲ್ಲಿ ಅದ್ಭುತವಾದ ಸೂರ್ಯಾಸ್ತವನ್ನು ಸಹ ಕಾಣಬಹುದು.

ಮಾಧ್ಯಮಗಳ ವರದಿ ಪ್ರಕಾರ ಪ್ರತಿ ವರ್ಷ ಗ್ರಾಂಡ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು 25,000 ಮಿಂಚಿನ ಹೊಡೆತಗಳು ಸಂಭವಿಸುತ್ತವೆ.

ವೀಡಿಯೊವನ್ನು ಸೋಮವಾರ ಪೋಸ್ಟ್ ಮಾಡಲಾಗಿದೆ ಮತ್ತು ಅಂದಿನಿಂದ ಸುಮಾರು 5,000 ವೀಕ್ಷಣೆಗಳು ಮತ್ತು ಅನೇಕ ಕಾಮೆಂಟ್, ಲೈಕ್ ಸ್ವೀಕರಿಸಲಾಗಿದೆ.

ಸುಂದರವಾದ ದೇವರ ಸೃಷ್ಟಿ ! ನಾನು ಅಲ್ಲಿರಲು ಬಯಸುತ್ತೇನೆ ! ಎಂದು ಒಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...