alex Certify ಪತಿ ಜೀವ ಕಾಪಾಡಲು ತನ್ನ ಕಿಡ್ನಿಯನ್ನೇ ದಾನ ಮಾಡಿದ ಪತ್ನಿ: ಇಳಿವಯಸ್ಸಿನ ಮನಮುಟ್ಟುವ ಪ್ರೇಮಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಜೀವ ಕಾಪಾಡಲು ತನ್ನ ಕಿಡ್ನಿಯನ್ನೇ ದಾನ ಮಾಡಿದ ಪತ್ನಿ: ಇಳಿವಯಸ್ಸಿನ ಮನಮುಟ್ಟುವ ಪ್ರೇಮಕಥೆ

ತನ್ನ ಪತಿಯ ಜೀವವನ್ನು ಕಾಪಾಡಲು ಪತ್ನಿಯಾದಾಕೆ ಪ್ರಾಣವನ್ನೂ ಪಣಕ್ಕಿಡುವಂಥ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಅಂಥದ್ದೇ ಒಂದು ಅಪೂರ್ವ ಲವ್​ ಸ್ಟೋರಿ ಇದು ಕೂಡ. ಎಂಟು ಸಲ ಡಯಾಲಿಸಿಸ್​ಗೆ ಒಳಗಾದ ನಂತರ ತನ್ನ ಗಂಡನ ಜೀವ ಉಳಿಸಲು ಹೆಂಡತಿಯೇ ತನ್ನ ಕಿಡ್ನಿ ದಾನ ಮಾಡಿದ್ದಾರೆ.

70 ವರ್ಷದ ಆಸುಪಾಸಿನಲ್ಲಿ ಇರುವ ಈ ದಂಪತಿಯ ಪ್ರೇಮ ಕಥೆ ಈಗ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ತಾಯಿಯ ತ್ಯಾಗದ ಕುರಿತು ಮಗ ಲಿಯೋ ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದಾರೆ. ‘ನನ್ನ ತಂದೆಯನ್ನು ಉಳಿಸಲು ನನ್ನ ತಾಯಿ ದೊಡ್ಡ ಸಹಾಯ ಮಾಡಿದರು. ಇವರಿಬ್ಬರ ಮಧ್ಯೆ ಇರುವ ಪ್ರೀತಿ ಮತ್ತು ಅನುಬಂಧ ಬಹಳ ದೊಡ್ಡದು’ ಎಂದು ಅವರ ಮಗ ಟ್ವಿಟರ್ ಪೋಸ್ಟ್​ ಮಾಡಿದ್ದು, ಇದೀಗ ವೈರಲ್​ ಆಗಿದೆ.

ನನ್ನ ಅಪ್ಪ ಡಯಾಲಿಸಿಸ್​ಗೆ ಒಳಗಾಗುವಾಗೆಲ್ಲ ನನ್ನ ಅಮ್ಮ ಅವರಿಗಾಗಿ ಸುಮಾರು 5 ತಾಸಿನ ತನಕ ಕಾಯ್ದುಕೊಂಡೇ ಇರುತ್ತಿದ್ದರು. ವಾರದಲ್ಲಿ 3 ದಿನ ಅವರಿಗೆ ಡಯಾಲಿಸಿಸ್ ಮಾಡುತ್ತಿದ್ದರು. ಈತನಕ ನನ್ನ ಅಪ್ಪ 98 ಸಲ ಡಯಾಲಿಸಿಸ್​ ಸೆಷನ್​ ಮಾಡಿಸಿಕೊಂಡಿದ್ದಾರೆ.

ಕೊನೆಗೆ ಅವರನ್ನು ಹೇಗಾದರೂ ಉಳಿಸಿಕೊಳ್ಳಲೇಬೇಕು ಎಂದು ನಿರ್ಧಾರ ಮಾಡಿದ ಅಮ್ಮ ತನ್ನ ಒಂದು ಮೂತ್ರಪಿಂಡವನ್ನು ಅಪ್ಪನಿಗೆ ದಾನ ಮಾಡಿದರು. ಈಗ ಇಬ್ಬರೂ ಆರಾಮಾಗಿ ಸಂತೋಷದಿಂದ ಇದ್ದಾರೆ. ನನಗಿದೊಂದು ಸುಂದರವಾದ ಪ್ರೇಮಕಥೆಯಂತೆ ಕಾಣುತ್ತಿದೆ ಎಂದಿದ್ದಾರೆ ಅವರ ಮಗ ಲಿಯೋ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...