alex Certify ಆದಾಯ ತೆರಿಗೆ: ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖರಹಿತ ಮೇಲ್ಮನವಿ ನಿಯಮಗಳಲ್ಲಿ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆದಾಯ ತೆರಿಗೆ: ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖರಹಿತ ಮೇಲ್ಮನವಿ ನಿಯಮಗಳಲ್ಲಿ ಬದಲಾವಣೆ

ಮುಖರಹಿತವಾಗಿ ಮೇಲ್ಮನವಿ ಸಲ್ಲಿಸುವ ಯೋಜನೆಗೆ ಒಂದಿಷ್ಟು ಮಾರ್ಪಾಡುಗಳನ್ನು ತಂದಿದೆ ಆದಾಯ ತೆರಿಗೆ ಇಲಾಖೆ. ಇಲಾಖೆಯ ತೆರಿಗೆ ಬೇಡಿಕೆ ವಿಚಾರವಾಗಿ ಏನಾದರೂ ಪ್ರಶ್ನೆಗಳಿದ್ದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವೈಯಕ್ತಿಕ ಆಲಿಕೆಗೆ ಮುಂದಾಗಲು ಇರುವ ಪ್ರಕ್ರಿಯೆಯನ್ನು ಈ ಮೂಲಕ ಇನ್ನಷ್ಟು ಸರಳಗೊಳಿಸಲಾಗಿದೆ.

ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಡಿಸೆಂಬರ್‌ 28ರಂದು ’ಮುಖರಹಿತ ಮೇಲ್ಮನವಿ ಯೋಜನೆ, 2021’ರ ವಿಚಾರವಾಗಿ ನೋಟಿಫಿಕೇಶನ್ ಹೊರಡಿಸಿದೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ವೈಯಕ್ತಿಕ ಆಲಿಕೆಗೆ ಆಯುಕ್ತರು (ಮೇಲ್ಮನವಿ) ಇನ್ನು ಮುಂದೆ ರಾಷ್ಟ್ರೀಯ ಮುಖರಹಿತ ಮೇಲ್ಮನವಿ ಕೇಂದ್ರದ ಮೂಲಕ ಆಲಿಕೆಯ ದಿನಾಂಕ ಹಾಗೂ ಸಮಯವನ್ನು ನಿಗದಿ ಪಡಿಸಬಹುದಾಗಿದೆ.

ವಿವಾಹ ಸಮಾರಂಭಗಳಿಗೂ ಇದೆ ವಿಮೆ…! ಯಾವೆಲ್ಲ ನಷ್ಟ ಕವರ್‌ ಆಗುತ್ತೆ ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

“ಇಂಥ ಆಲಿಕೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮುಖಾಂತರ ಅಥವಾ ವಿಡಿಯೋ ಟಿಲಿಫೋನಿ ಮೂಲಕ, ವಿಡಿಯೋ ಕಾನ್ಫರೆನ್ಸಿಂಗ್ ಅಥವಾ ವಿಡಿಯೋ ಟೆಲಿಫೋನಿಗೆ ಬೆಂಬಲಿಸಬಲ್ಲ, ತಾಂತ್ರಿಕವಾಗಿ ಕೈಗೆಟುಕುವಷ್ಟು ಮಟ್ಟದಲ್ಲಿರುವ ಯಾವುದೇ ರೀತಿಯ ಟೆಲಿಸಂಪರ್ಕದ ತಂತ್ರಾಂಶದ ಬಳಕೆಯೊಂದಿಗೆ, ಹಮ್ಮಿಕೊಳ್ಳಬಹುದಾಗಿದೆ,” ಎಂದು ಈ ನೋಟಿಫಿಕೇಶನ್ ತಿಳಿಸುತ್ತಿದೆ.

ಈ ಹಿಂದೆ ಇದ್ದ ’ಮುಖರಹಿತ ಮೇಲ್ಮನವಿ ಯೋಜನೆ, 2020’ರ ನಿಯಮದ ಅನುಸಾರ, ವೈಯಕ್ತಿಕ ಆಲಿಕೆಯಲ್ಲಿ ಹಾಜರಾಗಲು ಐಟಿಯ ಮುಖ್ಯ ಆಯುಕ್ತರು ಅಥವಾ ಮಹಾ ನಿರ್ದೇಶಕರ ಅನುಮತಿಯ ಅಗತ್ಯವಿತ್ತು.

ತೆರಿಗೆದಾರ ಹಾಗೂ ಕಂದಾಯ ಇಲಾಖೆಯ ನಡುವೆ ಮಾನವ ಮಧ್ಯಪ್ರವೇಶದ ಅಗತ್ಯವಿಲ್ಲದೆಯೇ, ಸಂಪರ್ಕ ಸಾಧಿಸಲು ಅನುವಾಗುವ ಮುಖರಹಿತ ಮೇಲ್ಮನವಿ ಯೋಜನೆಗೆ ಸೆಪ್ಟೆಂಬರ್‌ 25, 2020ರಲ್ಲಿ ಚಾಲನೆ ನೀಡಲಾಗಿದ್ದು, ಆಯುಕ್ತರ (ಮೇಲ್ಮನವಿ) ಬಳಿ ಮೇಲ್ಮನವಿ ಸಲ್ಲಿಸಲು ಸಂಪೂರ್ಣವಾದ ಮುಖರಹಿತ ಮಾರ್ಗವೊಂದನ್ನು ಒದಗಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...