alex Certify ಒಂದು ಕೋಟಿಗೂ ಅಧಿಕ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ರೀಫಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಕೋಟಿಗೂ ಅಧಿಕ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ರೀಫಂಡ್

ದೇಶದ 1.02 ಕೋಟಿಗೂ ಅಧಿಕ ತೆರಿಗೆದಾರರ ರೀಫಂಡ್‌ಗಳನ್ನು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅವರವರ ಖಾತೆಗಳಿಗೆ ಹಿಂದಿರುಗಿಸಿದೆ. 1,19,093 ಕೋಟಿ ರೂ. ಮೌಲ್ಯದ ಈ ರೀಫಂಡ್‌ಗಳು ಏಪ್ರಿಲ್ 1, 2021ರಿಂದ ನವೆಂಬರ್‌ 15, 2021ರ ನಡುವಿನ ಅವಧಿಯದ್ದಾಗಿದೆ.

ಇವುಗಳ ಪೈಕಿ, 1,00,42,619 ವೈಯಕ್ತಿಕ ಪ್ರಕರಣಗಳಿಗೆ ಸಂಬಂಧಿಸಿದ 38,034 ಕೋಟಿ ರೂಪಾಯಿಗಳು ಹಾಗೂ ಕಾರ್ಪೋರೇಟ್‌ ತೆರಿಗೆ ರೀಫಂಡ್‌ಗಳ ಸಂಬಂಧ 1,80,407 ಪ್ರಕರಣಗಳಲ್ಲಿ 81,059 ಕೋಟಿ ರೂಪಾಯಿಗಳನ್ನು ಮಂಡಳಿ ಹಿಂದಿರುಗಿಸಿದೆ.

2021-22ರ ವಿತ್ತೀಯ ವರ್ಷದಲ್ಲಿ 67.99 ಲಕ್ಷ ರೀಫಂಡ್ ಅರ್ಜಿಗಳಿಗೆ ಸೇರಿದಂತೆ ಒಟ್ಟಾರೆ 13,140.94 ಕೋಟಿ ರೂಪಾಯಿಗಳೂ ಇದರಲ್ಲಿ ಸೇರಿವೆ ಎಂದು ಸಿಬಿಡಿಟಿ ಮಾಹಿತಿ ನೀಡಿದೆ.

ಚಳಿಗಾಲದಲ್ಲಿ ಶಾರೀರಿಕ ಸಂಬಂಧದ ಜೊತೆ ಮಹಿಳೆ ಬಯಸೋದೇನು…..?

ಆದಾಯ ತೆರಿಗೆ ರೀಫಂಡ್‌ಗಳನ್ನು ಎರಡು ರೀತಿಗಳಲ್ಲಿ ಮಾಡಲಾಗುತ್ತದೆ — ಆರ್‌ಟಿಜಿಎಸ್‌/ಎನ್‌ಇಸಿಎಸ್‌ ಮತ್ತು ಕಾಗದ ರೂಪದ ಚೆಕ್. ಸಂಬಂಧಪಟ್ಟ ಅಧಿಕಾರಿ ರೀಫಂಡ್ ಬ್ಯಾಂಕರ್‌ಗೆ ಕಳುಹಿಸಿದ 10 ದಿನಗಳ ಬಳಿಕ ತೆರಿಗೆದಾರರು ರೀಫಂಡ್ ಸ್ಟೇಟಸ್‌ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ.

https://tin.tin.nsdl.com/oltas/refund-status-pan.html ಲಿಂಕ್‌ಗೆ ಭೇಟಿ ಕೊಟ್ಟು, ಪಾನ್ ಹಾಗೂ ತೆರಿಗೆ ಅಸೆಸ್ಮೆಂಟ್‌ ವರ್ಷದ ಮಾಹಿತಿ ನೀಡಿ, ರೀಫಂಡ್‌ ಸ್ಟೇಟಸ್ ನೋಡಿಕೊಳ್ಳಬಹುದಾಗಿದೆ.

ರೀಫಂಡ್ ಕೊಟ್ಟ ಸ್ಟೇಟಸ್ ನಿಮ್ಮ ತೆರಿಗೆ ಕ್ರೆಡಿಟ್ ಸ್ಟೇಟ್‌ಮೆಂಟ್ ರೂಪದಲ್ಲಿ ಅರ್ಜಿ 26ಎಎಸ್‌ನಲ್ಲಿ ನೋಡಲು ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...