ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು…… ದಶಕಗಳ ಹಿಂದಿನ ಹಾಡು ಇಂದಿಗೂ ಪ್ರಸ್ತುತವಾಗಿದೆ. ಮದ್ಯವ್ಯಸನಿಗಳಿಗೆ ಗುಂಡು ಒಳಗೆ ಹೋದರೆ ಸಾಕು ಎಲ್ಲಿಲ್ಲದ ಧೈರ್ಯ, ಆಕ್ರೋಶ ಹೊರ ಬರುತ್ತದೆ. ಆ ಸಂದರ್ಭದಲ್ಲಿ ಜಗಳಕ್ಕಿಳಿದರೆ ತಾವು ಏನು ಮಾಡುತ್ತಿದ್ದೇವೆ ಎಂಬ ಪ್ರಜ್ಞೆಯೂ ಅವರಿಗಿರುವುದಿಲ್ಲ. ಹೀಗಾಗಿ ಜಗಳಗಳು ಹಾದಿ ರಂಪ ಬೀದಿ ರಂಪವಾಗಿ ಬಿಡುತ್ತವೆ.
ಇಂತಹದ್ದೇ ಹಾದಿ-ಬೀದಿ ರಂಪಕ್ಕೆ ಇಬ್ಬರು ಮಹಿಳೆಯರು ಕಾರಣರಾಗಿದ್ದಾರೆ. ಭೋಪಾಲ್ ನ ಹೊಶಂಗಾಬಾದ್ ರಸ್ತೆಯ ಬಾರ್ ವೊಂದರಲ್ಲಿ ಕಂಠಪೂರ್ತಿ ಕುಡಿದ ಮಹಿಳೆಯರು ಬಾರ್ ನಿಂದ ಹೊರ ಬಂದು ನಡು ರಸ್ತೆಯಲ್ಲಿ ಜಗಳ ಶುರುವಿಟ್ಟುಕೊಂಡಿದ್ದಾರೆ. ಈ ಜಗಳ ಅತಿರೇಕಕ್ಕೆ ಹೋಗಿ ಪರಸ್ಪರ ಒಬ್ಬರಿಗೊಬ್ಬರು ಹಲ್ಲೆ ಮಾಡಿಕೊಂಡಿದ್ದಾರೆ.
ಬಾಳಾ ಠಾಕ್ರೆ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡ ‘ಮಹಾ’ಸಿಎಂ ಶಿಂಧೆ
ಈ `ಗುಂಡಿನ’ ಜಗಳದ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿವೆ. ಬಾಯ್ ಫ್ರೆಂಡ್ ವಿಚಾರದಲ್ಲಿ ಜಗಳವಾಡಿಕೊಂಡು ಈ ಮಹಿಳೆಯರು ತಲೆ ಹಿಡಿದು ಎಳೆದಾಡಿಕೊಂಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಜಗಳ ಮಾಡುತ್ತಿದ್ದ ಮಹಿಳೆಯರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದ್ದಾರೆ. ಅಂದಹಾಗೆ, ಈ ರಸ್ತೆಯಲ್ಲಿ ಹೆಜ್ಜೆಗೊಂದು ಬಾರ್ ಇದ್ದು, ಇಲ್ಲಿಗೆ ಹೆಚ್ಚಿನ ಮಹಿಳೆಯರು ಬಂದು ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ಜಗಳವಾಡುವುದು ಸಾಮಾನ್ಯವಾಗಿದೆಯಂತೆ…!