alex Certify ಹಳಿಗಳಲ್ಲಿ ಸಿಲುಕಿಕೊಂಡ ಟ್ರಕ್‌; ನೋಡನೋಡುತ್ತಿದ್ದಂತೆಯೇ ಬಂದು ಗುದ್ದಿದ ರೈಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳಿಗಳಲ್ಲಿ ಸಿಲುಕಿಕೊಂಡ ಟ್ರಕ್‌; ನೋಡನೋಡುತ್ತಿದ್ದಂತೆಯೇ ಬಂದು ಗುದ್ದಿದ ರೈಲು

ಟೆಕ್ಸಾಸ್‌ನ ಫ್ಯಾಬೆನ್ಸ್‌ನಲ್ಲಿ ರೈಲ್ವೇ ಹಳಿಯ ಮಧ್ಯದಲ್ಲಿ ಸಿಲುಕಿಕೊಂಡಿದ್ದ ಟ್ರಕ್‌ಗೆ ರೈಲು ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಈ ಘಟನೆಯ ವೀಡಿಯೊ ವೈರಲ್ ಆಗಿದ್ದು, ಹಾಗ್ ಎಂಬುವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ರೈಲು ಮುಂದೆ ಸಾಗುತ್ತಿದ್ದಂತೆ ಟ್ರಕ್ ರೈಲು ಹಳಿಗಳ ಮೇಲೆ ಸಿಲುಕಿಕೊಂಡಿದ್ದರಿಂದ 61 ಸೆಕೆಂಡುಗಳ ದೃಶ್ಯ ಕಾಣಬಹುದು‌.

ರೈಲ್ವೇ ಕ್ರಾಸಿಂಗ್‌ನ ಈ ಬದಿಯಲ್ಲಿ ಒಂದಿಬ್ಬರು ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರು.

ರೈಲು ಟ್ರಕ್‌ಗೆ ಗುದ್ದಿ ಮುಂದುವರಿದು ಹೋಯಿತು‌. ರೈಲ್ವೆ ಹಳಿಗಳ ಬಳಿ ನಿಂತಿದ್ದ ಜನರು ಸುರಕ್ಷಿತ ಸ್ಥಳಕ್ಕೆ ಓಡಿಹೋದರು, ಯಾರಿಗೂ ಗಾಯಗಳಾಗಿಲ್ಲ. ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...