alex Certify ಸ್ವಿಗ್ಗಿ ಇನ್​​ಸ್ಟಾಮಾರ್ಟ್​ನಲ್ಲಿ 2 ಸಾವಿರ ರೂ. ನಕಲಿ ನೋಟು; ಗ್ರಾಹಕರ ಅಚ್ಚರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಿಗ್ಗಿ ಇನ್​​ಸ್ಟಾಮಾರ್ಟ್​ನಲ್ಲಿ 2 ಸಾವಿರ ರೂ. ನಕಲಿ ನೋಟು; ಗ್ರಾಹಕರ ಅಚ್ಚರಿ

ಸ್ವಿಗ್ಗಿ ಇನ್​​ಸ್ಟಾಮಾರ್ಟ್​ನಲ್ಲಿ ಆರ್ಡರ್​ ಮಾಡಿದವರಿಗೆ 2000 ರೂಪಾಯಿಯ ನಕಲಿ ನೋಟುಗಳು ಬಂದಿರೋ ಘಟನೆ ನಡೆದಿದೆ. ಸ್ವಿಗ್ಗಿ ಕಂಪೆನಿ ಆಹಾರ, ವಿತರಣೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿರುವ ಇನ್​ಸ್ಟಾಮಾರ್ಟ್​ನಲ್ಲಿ ಈ ಘಟನೆ ನಡೆದಿದೆ.

ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಎಂಬ ಹೊಸ ಮಾರ್ಕೆಟಿಂಗ್ ತಂತ್ರವನ್ನು ಇತ್ತೀಚೆಗೆ ಜಾರಿಗೆ ತಂದಿದೆ. ಇದೀಗ ಈ ಸಂಸ್ಥೆ ಓಟಿಟಿ ಪ್ಲಾಟ್​​ಫಾರ್ಮ್​ನಲ್ಲಿ ಬಿಡುಗಡೆಯಾದ ಇತ್ತೀಚಿನ ಆಕ್ಷನ್ ಥ್ರಿಲ್ಲರ್ ವೆಬ್ ಸೀರಿಸ್​ ‘Farzi’ ಪ್ರಚಾರದ ಭಾಗವಾಗಿ, ತಮ್ಮ ಗ್ರಾಹಕರಿಗೆ ನಕಲಿ 2,000 ರೂ ನೋಟುಗಳನ್ನು ಪಾರ್ಸೆಲ್‌ಗಳಲ್ಲಿ ಕಳುಹಿಸಲಾಗಿದೆ. ಇದನ್ನು ನೋಡಿದ ಗ್ರಾಹಕರು ಆಶ್ಚರ್ಯಚಕಿತರಾಗಿದ್ದಾರೆ.

ಸ್ವಿಗ್ಗಿ ಪಾರ್ಸೆಲ್‌ನಲ್ಲಿ 2,000 ರೂಪಾಯಿ ನಕಲಿ ನೋಟುಗಳು ಬಂದಿವೆ ಎಂದು ಗ್ರಾಹಕರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ನೋಟುಗಳ ಫೋಟೋಗಳನ್ನೂ ಟ್ವೀಟ್ ಮಾಡಿದ್ದಾರೆ. ಇನ್ನು ಮುಂಬೈ, ದೆಹಲಿ, ಗುರ್ಗಾಂವ್, ನೋಯ್ಡಾ, ಕೋಲ್ಕತ್ತಾ, ಬೆಂಗಳೂರು, ಪುಣೆ, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿರುವ ಗ್ರಾಹಕರು ಸ್ವಿಗ್ಗಿ ಪಾರ್ಸೆಲ್‌ಗಳಲ್ಲಿ 2,000 ರೂಪಾಯಿ ನಕಲಿ ನೋಟುಗಳನ್ನು ಸ್ವೀಕರಿಸಿದ್ದಾರೆ. ನಕಲಿ 2,000 ರೂಪಾಯಿ ನೋಟುಗಳು ಫರ್ಝಿ ವೆಬ್​ಸೀರಿಸ್​ನಲ್ಲಿ ನಟಿಸಿರುವ ಶಾಹಿದ್ ಕಪೂರ್ ಮತ್ತು ವಿಜಯ್ ಸೇತುಪತಿ ಅವರ ಫೋಟೋಗಳನ್ನು ಹೊಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...