alex Certify SPECIAL: ಸ್ವಂತ ಖರ್ಚಿನಿಂದ ಅಣೆಕಟ್ಟೆ ನಿರ್ಮಿಸಿಕೊಂಡ ಗ್ರಾಮಸ್ಥರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SPECIAL: ಸ್ವಂತ ಖರ್ಚಿನಿಂದ ಅಣೆಕಟ್ಟೆ ನಿರ್ಮಿಸಿಕೊಂಡ ಗ್ರಾಮಸ್ಥರು

ದಿನೇ ದಿನೇ ಕ್ಷೀಣಿಸುತ್ತಿರುವ ಅಂತರ್ಜಲದ ಸಮಸ್ಯೆಗೆ ತಮ್ಮಿಂದಲೇ ಪರಿಹಾರ ಕಂಡುಕೊಳ್ಳಲು ಮುಂದಾದ ರಾಜಸ್ತಾನದ ಬುಂದಿ ಜಿಲ್ಲೆಯ ನೈನ್ವಾ ಉಪವಿಭಾಗದ 13 ಗ್ರಾಮಗಳ ಮಂದಿ 45 ಲಕ್ಷ ರೂಪಾಯಿ ಸಂಗ್ರಹಿಸಿ 2050 ಅಡಿ ಉದ್ದದ ಕಿರು ಅಣೆಕಟ್ಟೊಂದನ್ನು ನಿರ್ಮಿಸಿದ್ದಾರೆ.

ಈ ಅಣೆಕಟ್ಟೆಯನ್ನು 29 ದಿನಗಳಲ್ಲಿ ನಿರ್ಮಿಸಲಾಗಿದ್ದು, 13 ಗ್ರಾಮಗಳ ಗ್ರಾಮಸ್ಥರು ಹಗಲು ಇರುಳು ಎನ್ನದೇ ಶ್ರಮ ಹಾಕಿ ಕಟ್ಟಿದ್ದಾರೆ. 80 ಅಡಿ ಅಗಲ ಹಾಗೂ 29 ಅಡಿ ಎತ್ತರದ ಈ ಅಣೆಕಟ್ಟೆಯನ್ನು ಸರ್ಕಾರದ ನೆರವಿಲ್ಲದೇ, ಬಾಮನ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ.

ಅಣೆಕಟ್ಟೆ ನಿರ್ಮಾಣಕ್ಕಾಗಿ ಸ್ಥಳೀಯ ರೈತರು 56 ಹೆಕ್ಟೇರ್‌ ಭೂಮಿಯನ್ನು ದಾನ ಮಾಡಿದ್ದಾರೆ.

ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಸುದ್ದಿ..! ಭಾರತ-ಪಾಕ್ ಮಧ್ಯೆ ನಡೆಯಲಿದೆ ಪಂದ್ಯ

ಅಂತರ್ಜಲ ಮಟ್ಟವು 800 ಅಡಿಗಿಂತ ಕೆಳಗೆ ಕುಸಿದಿರುವ ಕಾರಣ ಬಾಮನ್ ಪ್ರದೇಶವನ್ನು ಒಣ ಪ್ರದೇಶವೆಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಭಾರೀ ಪರದಾಟವಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಬೇಸತ್ತ ಈ ಗ್ರಾಮಸ್ಥರು ತಮ್ಮದೇ ಪರಿಶ್ರಮದಲ್ಲಿ ಪರಿಹಾರ ಕಂಡುಕೊಂಡಿದ್ದಾರೆ.

ದೇವಸ್ಥಾನವೊಂದರ ನಿರ್ಮಾಣಕ್ಕೆಂದು ಇಡಲಾಗಿದ್ದ 19 ಲಕ್ಷ ರೂಪಾಯಿಗಳೊಂದಿಗೆ, ಸಾಸಿವೆ ಮಾರಿ ಸಿಕ್ಕ 15 ಲಕ್ಷ ಸೇರಿಸಿಕೊಂಡ ಗ್ರಾಮಸ್ಥರು ಮಿಕ್ಕ 11 ಲಕ್ಷ ರೂಪಾಯಿಗಳನ್ನು ತಮ್ಮ ತಮ್ಮಲ್ಲೇ ದೇಣಿಗೆ ರೂಪದಲ್ಲಿ ಸಂಗ್ರಹಿಸಿಕೊಂಡಿದ್ದಾರೆ.

ಯಾವುದೇ ಇಂಜಿನಿಯರ್‌ ನೆರವಿಲ್ಲದೇ, 6 ಜೆಸಿಬಿ ಯಂತ್ರಗಳು ಹಾಗೂ 46 ಟ್ರಾಕ್ಟರ್‌ಗಳ ನೆರವಿನಿಂದ ಈ ಅಣೆಕಟ್ಟೆಯನ್ನು ನಿರ್ಮಿಸಿದ್ದಾರೆ ಗ್ರಾಮಸ್ಥರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...