alex Certify ಧೋನಿ – ಕೊಹ್ಲಿ ನಡುವಿನ ವಿಶೇಷ ಬಾಂಡ್ ಕಂಡು ಅಭಿಮಾನಿಗಳು ಫುಲ್​ ಖುಷ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿ – ಕೊಹ್ಲಿ ನಡುವಿನ ವಿಶೇಷ ಬಾಂಡ್ ಕಂಡು ಅಭಿಮಾನಿಗಳು ಫುಲ್​ ಖುಷ್​..!

ಐಪಿಎಲ್​ 2021ರ ಟೂರ್ನಿಯ ಎರಡನೇ ಭಾಗ ಯುಎಇನಲ್ಲಿ ನಡೆಯುತ್ತಿದೆ. ಶಾರ್ಜಾ ಅಂಗಳದಲ್ಲಿ ನಡೆದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ನಡುವಿನ ರೋಚಕ ಪಂದ್ಯದಲ್ಲಿ ಕೊಹ್ಲಿ ಪಡೆ ಮಂಡಿಯೂರಿದೆ. ಈ ಮೂಲಕ ಕೊಹ್ಲಿ ಪಡೆಯ ಸೋಲಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ ಪಂದ್ಯದ ಫಲಿತಾಂಶದ ಬಳಿಕ ನಿರಾಸೆ ಅನುಭವಿಸಿದ್ದರೂ ಸಹ ತಮ್ಮ ಸ್ನೇಹಿತ ಮಹೇಂದ್ರ ಸಿಂಗ್​ ಧೋನಿ ಜೊತೆ ಜಾಲಿ ಮಾಡುವುದನ್ನು ಮರೆಯಲಿಲ್ಲ.

ಪಂದ್ಯ ಮುಕ್ತಾಯದ ಬಳಿಕ ಧೋನಿ ತಮ್ಮ ತಂಡದ ಸದಸ್ಯರ ಜೊತೆ ಮಾತನಾಡುತ್ತಿದ್ದ ವೇಳೆ ಹಿಂಬದಿಯಿಂದ ಕೊಹ್ಲಿ, ಧೋನಿಯನ್ನು ಆಲಂಗಿಸಿಕೊಂಡಿದ್ದಾರೆ.

ಈ ಅದ್ಭುತ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಐಪಿಎಲ್​ ಪಂದ್ಯಾವಳಿಯಲ್ಲಿ ಆರ್​ಸಿಬಿ ಹಾಗೂ ಸಿಎಸ್​ಕೆ ಅಭಿಮಾನಿಗಳು ಕಟ್ಟಾ ವೈರಿಗಳಂತೆ ವರ್ತಿಸಿದ್ರೂ ಸಹ ಎರಡೂ ತಂಡ ನಾಯಕರ ನಡುವಿನ ಈ ವಿಶೇಷವಾದ ಬಾಂಡ್​​ ಅಭಿಮಾನಿಗಳ ಕೋಪವನ್ನು ಕೊಂಚ ಕಡಿಮೆ ಮಾಡಿದ್ದಂತೂ ಸುಳ್ಳಲ್ಲ.

— Johns. (@CricCrazyJohns) September 24, 2021

 

 

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...