alex Certify ಟ್ರಕ್‌ ಚಾಲಕನಿಗೆ ಗಿಫ್ಟ್‌ ನೀಡಿದ ಪುಟ್ಟ ಬಾಲಕ; ಮುಂದೇನಾಯ್ತು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಕ್‌ ಚಾಲಕನಿಗೆ ಗಿಫ್ಟ್‌ ನೀಡಿದ ಪುಟ್ಟ ಬಾಲಕ; ಮುಂದೇನಾಯ್ತು ಗೊತ್ತಾ ?

ಮುಂದುವರಿದ ದೇಶಗಳಲ್ಲಿ ರೀಸೈಕಲ್​ ಟ್ರಕ್​ ಸಾಮಾನ್ಯ ಬಳಕೆಯಲ್ಲಿದೆ. ಕಸ ಸಂಗ್ರಹಣಾ ವಾಹನದಂತೆಯೇ ಬಳಸಲಾಗುತ್ತದೆ. ಉಪಯೋಗಿಸದೇ ತ್ಯಾಜ್ಯದ ರೀತಿ ಉಳಿದ ಮರು ಬಳಕೆ ಮಾಡಬಹುದಾದ ವಸ್ತುವನ್ನು ಕ್ರಶ್​ ಮಾಡಿ ಕೊಂಡೊಯ್ಯಲಾಗುತ್ತದೆ.

ಇದೀಗ ಈ ರೀಸೈಕಲ್​ ಟ್ರಕ್​ ಚಾಲಕನಿಗೆ ಬಾಲಕ ಗಿಫ್ಟ್ ನೀಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಹೃದಯ ಬೆಚ್ಚಗಾಗಿಸಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ ವಿಡಿಯೊದಲ್ಲಿ, ರೀ ಸೈಕಲ್​ ಟ್ರಕ್​ ಚಾಲಕ​ ಉಡುಗೊರೆಯನ್ನು ಸ್ವೀಕರಿಸುವಾಗ ಹಾವಭಾವವೂ ವೀಕ್ಷಿಸಲು ಸಂತೋಷಕರವಾಗಿದೆ.

ತಂದೆಯ ತೋಳಿನಲ್ಲಿದ್ದ ಬಾಲಕ ಟ್ರಕ್​ ನಿಲ್ಲುತ್ತಿದ್ದಂತೆ, ಚಾಲಕನಿಗೆ ಉಡುಗೊರೆಯನ್ನು ನೀಡುತ್ತಾನೆ. ಹುಡುಗನ ಔದಾರ್ಯಕ್ಕೆ ಧನ್ಯವಾದ ಹೇಳಲು, ಆ ವ್ಯಕ್ತಿ ಚಪ್ಪಾಳೆ ತಟ್ಟುವ ಸನ್ನೆಯನ್ನು ಹೋಲುವ ರೀತಿಯಲ್ಲಿ ಟ್ರಕ್​ ಅನ್ನು ನಿರ್ವಹಿಸುತ್ತಾನೆ.

ಹುಡುಗ ಕೂಡ ಒಂದೇ ಸಮನೆ ಚಪ್ಪಾಳೆ ಹೊಡೆಯಲು ಪ್ರಾರಂಭಿಸುತ್ತಾನೆ. ಈ ವಿಡಿಯೊವನ್ನು ಒಂದು ದಿನದ ಹಿಂದೆ ಇನ್​ಸ್ಟಾಗ್ರಾಮ್​ ಪುಟದಲ್ಲಿ ಪೋಸ್ಟ್​ ಮಾಡಲಾಗಿದ್ದು, ಇದುವರೆಗೂ 1.16 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...