ವಿಶಿಷ್ಟ ಅಭಿಯಾನಕ್ಕೆ ಚಾಲನೆ ಕೊಟ್ಟಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಹಳೆಯ ಮರಗಳನ್ನು ರಕ್ಷಿಸಲು ಮರಗಳ ಸರ್ಜನ್‌ಗಳನ್ನು ನೇಮಿಸಿದೆ.
ಆರ್ಬಾರಿಸ್ಟ್ ಅಥವಾ ಆರ್ಬೋರಿಕಲ್ಚರಿಸ್ಟ್‌ಗಳೆಂದು ಕರೆಯಲ್ಪಡುವ ಈ ಮಂದಿ ಹಳೆಯ ಮರಗಳ ಅಧ್ಯಯನ ನಡೆಸಿ, ಅವುಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ.
ಡಾನ್ಸ್ ವಿಡಿಯೋಗಳಿಗೆ ದೇಸೀ ಟಚ್: ಮುಗಿಬಿದ್ದು ನೋಡಿದ ನೆಟ್ಟಿಗರು
“ಬಹಳಷ್ಟು ಬಾರಿ, ಪ್ರವಾಹ ಉಂಟಾದಾಗ ಅಥವಾ ಭಾರೀ ಮಳೆಯಾದಾಗ, ಅಥವಾ ಇನ್ನಾವುದೇ ಕಾರಣಗಳಿಗೆ ಮರಗಳು ಬೀಳುವ ಸಾಧ್ಯತೆ ಇರುತ್ತದೆ. ಕೊಳೆಯುವ ರೆಂಬೆಗಳು, ಫಂಗಲ್ ಸೋಂಕು ಅಥವಾ ಸಡಿಲವಾದ ಬೇರುಗಳ ಕಾರಣದಿಂದ ಮರಗಳು ಬೀಳಬಹುದು. ಇಂಥ ವಿಷಯಗಳು ಹೊರಗಿನಿಂದ ಗೊತ್ತಾಗುವುದಿಲ್ಲ. ಇದರಿಂದಾಗುವ ಅಪಘಾತಗಳನ್ನು ತಗ್ಗಿಸಿ, ಇಂಥ ಮರಗಳು ಬೀಳುವುದನ್ನು ತಪ್ಪಿಸಲೆಂದು, ಮುಂಚೂಣಿಯಾಗಿಯೇ ಈ ಮರಗಳ ನೆರವಿಗೆ ಬರಲೆಂದು ನನ್ನನ್ನು ನೇಮಿಸಲಾಗಿದೆ,” ಎನ್ನುತ್ತಾರೆ ಆರ್ಬಾರಿಸ್ಟ್ ವೈಭರ್ ರಾಜೇ.
ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಚುಂಬನ: ಲಿಪ್ ಕಿಸ್, ಫ್ರೆಂಚ್ ಕಿಸ್ ಅಡ್ಡ ಪರಿಣಾಮಗಳ ಬಗ್ಗೆ ಇಲ್ಲಿದೆ ವಿವರ
ದೇಸೀ ಮರಗಳನ್ನು ಹೆಚ್ಚಾಗಿ ಉತ್ತೇಜಿಸುವ ಮೂಲಕ ಮಣ್ಣಿನ ಸವೆತದಿಂದ ನಗರವನ್ನು ಕಾಪಾಡಲು ಬಿಎಂಸಿ ಮುಂದಾಗಿದೆ ಎಂದು ನಗರದ ಮೇಯರ್ ಕಿಶೋರಿ ಪೆಡ್ನೇಕರ್ ತಿಳಿಸಿದ್ದಾರೆ.