alex Certify ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಚುಂಬನ: ಲಿಪ್ ಕಿಸ್, ಫ್ರೆಂಚ್ ಕಿಸ್ ಅಡ್ಡ ಪರಿಣಾಮಗಳ ಬಗ್ಗೆ ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಚುಂಬನ: ಲಿಪ್ ಕಿಸ್, ಫ್ರೆಂಚ್ ಕಿಸ್ ಅಡ್ಡ ಪರಿಣಾಮಗಳ ಬಗ್ಗೆ ಇಲ್ಲಿದೆ ವಿವರ

ಪ್ರೀತಿ ಮಾಡಲು ಯಾವುದೇ ದಿನ ಅಥವಾ ತಿಂಗಳು ಮುಖ್ಯವಲ್ಲವಾದರೂ, ಫೆಬ್ರವರಿ ತಿಂಗಳು ಪ್ರೀತಿಸುವವರಿಗೆ ವಿಶೇಷವಾಗಿದೆ. ಫೆಬ್ರವರಿಯಲ್ಲಿ ಪ್ರೇಮಿಗಳ ದಿನ ಆಚರಿಸಲಾಗುತ್ತದೆ. ಜೋಡಿಗಳು ತಮ್ಮ ಸಂಗಾತಿಗೆ ತಮ್ಮದೇ ಆದ ರೀತಿಯಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸುತ್ತಾರೆ.

ʼವ್ಯಾಲೆಂಟೈನ್ಸ್ ವೀಕ್ʼ ನ ಸೌಂದರ್ಯ ಮಾರುಕಟ್ಟೆಗಳಲ್ಲಿ ವಿಭಿನ್ನವಾಗಿ ಕಂಡುಬರುತ್ತದೆ. ಅಂತೆಯೇ ಕಿಸ್ ಡೇ ಬಗ್ಗೆ ಹೇಳುವುದಾದರೆ, ಫೆಬ್ರವರಿ 13 ರಂದು ಕಿಸ್ ಡೇ ಆಚರಿಸಲಾಗುತ್ತದೆ. ಪ್ರೀತಿಯಲ್ಲಿದ್ದವರು ತಮ್ಮ ಸಂಗಾತಿಯನ್ನು ಚುಂಬಿಸುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಅನೇಕರ ಪ್ರೀತಿಯ ಶೈಲಿ ವಿಭಿನ್ನವಾಗಿರುತ್ತದೆ.

ಕೆಲವು ಸಂಗಾತಿಗಳು ಫ್ರೆಂಚ್ ಕಿಸ್ ಮಾಡಲು ಇಷ್ಟಪಡುತ್ತಾರೆ, ಕೆಲವರು ಲಿಪ್ ಕಿಸ್, ಮತ್ತೆ ಕೆಲವರು ಕೆನ್ನೆ ಮತ್ತು ಹಣೆಯ ಮೇಲೆ ಚುಂಬಿಸಲು ಇಷ್ಟಪಡುತ್ತಾರೆ. ನಿಮ್ಮ ಸಂಗಾತಿಯನ್ನು ಚುಂಬಿಸಲು ನೀವು ಯೋಚಿಸುತ್ತಿದ್ದರೆ, ಜಾಗರೂಕರಾಗಿರಿ. ಏಕೆಂದರೆ, ಚುಂಬನವು ನಿಮ್ಮನ್ನು ಅನೇಕ ಗಂಭೀರ ಕಾಯಿಲೆಗಳಿಗೆ ಗುರಿಯಾಗಿಸುವ ಸಾಧ್ಯತೆ ಇರುತ್ತದೆ.

ಕಿಸ್ ಅಡ್ಡ ಪರಿಣಾಮಗಳು(ಸೈಡ್ ಎಫೆಕ್ಟ್ಸ್)

ಇನ್ ಫ್ಲುಯೆಂಜ

ನಿಮ್ಮ ಸಂಗಾತಿ ಇನ್ ಫ್ಲುಯೆಂಜ ಸೋಂಕಿನಿಂದ ಬಳಲುತ್ತಿದ್ದರೆ, ಅವರನ್ನು ಚುಂಬಿಸಲು ಮುಂದಾಗಬೇಡಿ. ಏಕೆಂದರೆ, ಹೀಗೆ ಮಾಡುವುದರಿಂದ ನೀವು ಸ್ನಾಯು ನೋವು, ತಲೆನೋವು, ಜ್ವರ ಮತ್ತು ಗಂಟಲು ನೋವು ತಂದುಕೊಳ್ಳಬಹುದು. ಈ ಸೋಂಕು ಲೋಳೆಯ ಅಥವಾ ಲಾಲಾರಸದ ಮೂಲಕ ಹರಡುತ್ತದೆ, ಆದ್ದರಿಂದ ಅಂತಹ ಜನರನ್ನು ಚುಂಬಿಸಬೇಡಿ.

ಹರ್ಪಿಸ್ ಸೋಂಕು

ಪರಸ್ಪರ ಚುಂಬನ (ಕಿಸ್) ಹರ್ಪಿಸ್ ಸೋಂಕನ್ನು ಹರಡಬಹುದು. ಇದು ಒಂದು ರೀತಿಯ ವೈರಲ್ ಸೋಂಕು. ಅದರ ಹಿಡಿತದಿಂದಾಗಿ, ಬಾಯಿಯ ಸುತ್ತಲೂ ಆಳವಾದ ಕಲೆಗಳು ಉಳಿಯುತ್ತವೆ.

ಹುಣ್ಣು

ಚುಂಬನದ ಮೂಲಕ, ಸಿಫಿಲಿಸ್ ಎಂಬ ಕಾಯಿಲೆ ಹರಡುತ್ತದೆ ಮತ್ತು ಈ ಕಾಯಿಲೆಯಿಂದ ಬಾಯಿಯಲ್ಲಿ ಸಣ್ಣ ಹುಣ್ಣುಗಳು ಕಂಡುಬರುತ್ತವೆ. ಸಿಫಿಲಿಸ್ ಸೋಂಕಿಗೆ ಒಳಗಾದ ವೇಳೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬಹುದು.

ಮೆನಿಂಜೈಟಿಸ್ ಬ್ಯಾಕ್ಟೀರಿಯಾ

ಚುಂಬನವು ನಿಮ್ಮ ಸಂಗಾತಿಯ ಬಗ್ಗೆ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿರಬಹುದು. ಆದರೆ, ಇದು ಮೆನಿಂಜೈಟಿಸ್ ಬ್ಯಾಕ್ಟೀರಿಯಾವನ್ನು ಹರಡುತ್ತದೆ. ಅದರಿಂದ ಬಳಲುತ್ತಿರುವ ವ್ಯಕ್ತಿಯ ಕುತ್ತಿಗೆಯಲ್ಲಿ ಬಿಗಿತ, ಜ್ವರ ಮತ್ತು ತಲೆನೋವು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಬ್ಯಾಕ್ಟೀರಿಯಾ

ಅನೇಕ ಜನರು ತಮ್ಮ ಒಸಡುಗಳು ಮತ್ತು ಹಲ್ಲುಗಳಲ್ಲಿ ಎಲ್ಲಾ ರೀತಿಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ನೀವು ಅಂತಹ ವ್ಯಕ್ತಿಯನ್ನು ಚುಂಬಿಸಿದರೆ ಅದು ನಿಮಗೂ ಸಮಸ್ಯೆಗಳನ್ನು ಉಂಟುಮಾಡುತ್ತದೆ. ವಾಸ್ತವವಾಗಿ, ಚುಂಬನವು ಬಾಯಿಯ ಬ್ಯಾಕ್ಟೀರಿಯಾವನ್ನು ಹರಡುತ್ತದೆ. ನಿಮ್ಮ ಸಂಗಾತಿ ಹಲ್ಲುಗಳಿಂದಲೂ ಸಮಸ್ಯೆಗಳು ಬರಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...